ಕೈಕಂಬ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಇದರ ವತಿಯಿಂದ ಕೈಕಂಬ ಮತ್ತು ಎಡಪದವು ವಲಯ ಸಮಿತಿ ಇದರ ” ವಾರ್ಷಿಕ ಮಹಾಸಭೆ” ಯು ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳದಲ್ಲಿ ನ.20ರಂದು ಜರಗಿತು.

sabhe

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಕಾಜಿಲಕೋಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ” ವಾರ್ಷಿಕ ವರದಿ ಲೆಕ್ಕಪತ್ರ ಮಂಡನೆ” ಮಾಡಲಾಯಿತು.

ಜಲ್ಲಾ ಸಮಿತಿ ಅಧ್ಯಕ್ಷ ಉದಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಯಶಂಕರ್, ಜಿಲ್ಲಾ ಸಮಿತಿ ಅಧ್ಯಕ್ಷ ಸುಜಾತಾ ಜೋಗಿ, ಪ್ರಧಾನ ಕಾರ್ಯದರ್ಶಿ ಶೇಖರ್ ಪಡು ಮತ್ತಿತರರು ಉಪಸ್ಥಿತರಿದ್ದರು. ಕೇಶವ್ ಅಮ್ಮುಂಜೆ ಸ್ವಾಗತಿಸಿ, ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂದರ್ಭ ಹಿರಿಯ ವೃತ್ತಿ ಭಾಂಧವರಾದ ಶಿವಪ್ಪ ಸಪಲಿಗ, ಕೋಟ್ಯಪ್ಪ ಪೂಜಾರಿ, ಮೀರ್ ಸಾದಿಕ್ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಗರಿಷ್ಠ ಅಂಕ ಗಳಿಸಿದ ಟೈಲರ್ ವೃತ್ತಿ ಭಾಂದವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅನಾರೋಗ್ಯ ಪೀಡಿತರಾದ ಅಣ್ಣಪ್ಪ ಹಾಗೂ ಯಾದವ ಪೂಜಾರಿ ಇವರುಗಳಿಗೆ ಸಹಾಯಧನ ವಿತರಿಸಲಾಯಿತು. ಸಭಿಕರಿಗೆ ವಿವಿಧ ಬಗೆಯ ಸ್ಪರ್ಧೆಗಳು ಜರಗಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

By Suddi9

Leave a Reply

Your email address will not be published. Required fields are marked *