ಬಜಪೆ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ಮೇಳಗಳ ತಿರುಗಾಟ ಆರಂಭವಾಯಿತು ಭಕ್ತರು ದುರ್ಗೆಗೆ ಸಲ್ಲಿಸುವ ಅನೇಕ ಸೇವೆಗಳಲ್ಲಿ ಯಕ್ಷಗಾನ ಸೇವೆಯೂ ಒಂದು. ಕಟೀಲಿನಲ್ಲಿ ಈಗಾಗಲೇ ಆರು ಯಕ್ಷಗಾನ ಮೇಳಗಳಿದೆ, ಇಲ್ಲಿ ಯಕ್ಷರಾಧನೆ ವಿಶೇಷ ಸ್ಥಾನವನ್ನು ಪಡೆದಿದ್ದು, ಉಭಯತಿಟ್ಟುಗಳಲ್ಲಿಯೇ ಅತೀ ಹೆಚ್ಚು ಮೇಳಗಳನ್ನು ಹೊಂದಿರುವ ದೇವಳ ಎಂಬ ಪ್ರಖ್ಯಾತಿಯನ್ನು ಹೊಂದಿದೆ, ಕಾರ್ತಿಕ ದೀಪೋತ್ಸವದ ಅನಂತರದ ಶುಭದಿನದಂದು ಮೇಳ ಹೊರಡಿ, ವೈಷಭ ಮಾಸದ 11 ನೆಯ ದಿನ ಮೇಳ ಒಳಗಾಗುವ ಕ್ರಮ ದೇವಳದಲ್ಲಿದೆ.

mela-2

mela

ಮೇಳ ಹೊರಡುವ ದಿನ ಬೆಳಿಗ್ಗೆ ದೇವರ ಪೂಜಾ ಕಿರೀಟಗಳ ಪ್ರತಿಷ್ಠೆ ನಡೆಯುತ್ತದೆ. ಸಾಯಂಕಾಲ ಪ್ರತಿ ಮೇಳದ ಭಾಗವತರಿಂದ ದೇವಿ ಸನ್ನಿಧಿಯಲ್ಲಿ ಗಣಪತಿ ಸ್ತುತಿ, ದುರ್ಗಾಸ್ತುತ ನಡೆಯುತ್ತದೆ ಇದನ್ನು ತಾಳ ಮದ್ದಲೆ ಅಂತಲೂ ಕರೆಯುತ್ತಾರೆ. ನಂತರ ಭಾಗವತರಿಗೆ, ಮದ್ದಳೆಗಾರರಿಗೆ, ಹಾಸ್ಯದವರಿಗೆ ಪ್ರಸಾದ ನೀಡಲಾಗುತ್ತದೆ ಆ ಮೇಲೆ ದೇವತಾ ಪ್ರಾರ್ಥನೆ, ದೇವರ ಪೂಜೆ, ದೇವರ ಪ್ರಸಾದ ಹಾಕಿ ಅರ್ಚಕರಾದ ಅಸ್ರಣ್ಣರು ಭಾಗವತರಿಗೆ ಜಾಗಟೆ, ಹಿಮ್ಮೇಳದವರಿಗೆ ಚೆಂಡೆ ಮದ್ದಲೆ, ಮೇಳವೊಂದರ ತಲಾ ಇಬ್ಬರು ಕಲಾವಿದರಿಗೆ ಗೆಜ್ಜೆಗಳನ್ನು ನೀಡುತ್ತಾರೆ ನಂತರ ದೇವರ ಎದುರು ವೇಷ ಕಾಕಿದ ಕಲಾವಿದರು ಕುಣಿಯುತ್ತಾರೆ.

mela-6

ಚೌಕಿ ಪೂಜೆಯ ನಂತರ ಯಕ್ಷಗಾನದ ಪೂರ್ವ ರಂಗವು ರಥಬೀದಿಯಲ್ಲಿ ಹಾಕಿದ ಆರೂ ರಂಗಸ್ಥಳದಲ್ಲಿ ನಡೆಯುತ್ತದೆ, ಒಡ್ಡೋಲಗದ ನಂತರ ಒಂದೇ ರಂಗಸ್ಥಳದಲ್ಲಿ ಯಕ್ಷಗಾನ ನಡೆಯುತ್ತದೆ, ಕಟೀಲಿನಲ್ಲಿ ಪ್ರಸ್ತುತ ಆರು ಮೇಳಗಳಿದ್ದು, ಈಗಲೂ ಪ್ರತೀ ನಿತ್ಯ ಯಕ್ಷಗಾನ ಸೇವೆಯು ನೋಂದಣಿ ಆಗುತ್ತಿದೆ. ವರ್ಷದ ಸುಮಾರು ಆರು ತಿಂಗಳುಗಳ ಕಾಲ ನಿರಂತರ ಸೇವೆ ನಡೆಯುತಿರುತ್ತದೆ ಆರು ಮೇಳಗಳು ವರ್ಷಕ್ಕೆ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನಗಳನ್ನು ನೀಡುತ್ತದೆ, ಪ್ರತೀ ವರ್ಷ ಆಟ ನಡೆಯುವ ಸಂಖ್ಯೆ ಸುಮಾರು ಒಂದು ಮೇಳಕ್ಕಾಗುವಷ್ಟು ಇದೆ, ಕೇವಲ ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಿದ್ದು ಅತೀ ಹೆಚ್ಚು ದೇವಿ ಮಹಾತ್ಮೆ ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿದೆ.

mela-3

ಪ್ರತೀ ದಿನ ತಲಾ ಎರಡರಂತೆ ಆಟ ಈಗಲೂ ಬುಕಿಂಗ್ ನಡೆಯುತ್ತಿದ್ದು, ಆರು ಮೇಳಗಳಿಗೆ ಸುಮಾರು 20 ವರ್ಷಕಾಗುವಷ್ಟು ಆಟಗಳು ಈಗಾಗಲೇ ನೊಂದಣಿ ಆಗಿದೆ, ಮೇಳದಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚು ಕಲಾವಿದರು ಇದ್ದು ರಜೆ ಸಂಬಳ ಆರೋಗ್ಯವಿಮೆ ಮತ್ತಿತರರ ಸೌಲಭ್ಯಗಳು ಕಲಾವಿದರಿಗೆ ಸಿಗುತ್ತಿದೆ, ಆರೂ ಮೇಳಗಳಲ್ಲಿ ಚಿನ್ನ ಬೆಳ್ಳಿಯ ಅಭರಣವಿದ್ದು, ಈ ಬಾರಿ ಆರೂ ಮೇಳಗಳ ದೇವಿ ಪಾತ್ರದ ಬೆಳ್ಳಿಯ ಕಿರೀಟ ದಾನಿಗಳಾದ ಬಜಪೆ ಶಾಂತಿ ಭವನದ ಜಲಾಜಾಕ್ಷಾಮ್ಮ ಹಾಗೂ ಮಕ್ಕಳಾದ ರಾಘವೇಂದ್ರ ಆಚಾರ್ಯ ಮತ್ತು ರವಿರಾಜ ಆಚಾರ್ಯ ಅವರ ಸೇವಾ ರೂಪವಾಗಿ ಸುಮಾರು 15 ಲಕ್ಷ ವೆಚ್ಚದಲ್ಲಿ ಚಿನ್ನದ ಲ್ಯಾಮಿನೇಟ್ ಮಾಡಲಾಗಿದ್ದು ದೇವರಿಗೆ ಸಂದಾಯವಾಗಿದೆ, ಒಟ್ಟಿನಲ್ಲಿ ಉಭಯ ತಿಟ್ಟುಗಳಲ್ಲಿ ಕಟೀಲು ಯಕ್ಷಗಾನ ಮೇಳ ವಿಶೇಷ ಸ್ಥಾನವನ್ನು ಪಡೆದಿದೆ.

-ನಿಶಾಂತ್ ಶೆಟ್ಟಿ ಕಿಲೆಂಜೂರು

By suddi9

Leave a Reply

Your email address will not be published. Required fields are marked *