ಮೂಡುಬಿದಿರೆ: ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾದ ಸಹ್ಯಾದ್ರಿ ಸೈನ್ಸ್ ಟಾಲೆಂಟ್ ಹಂಟ್-2016 ಸ್ಪರ್ಧೆ ಸ್ಟಿಲ್ ಮಾಡೆಲ್ ವಿಭಾಗದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜು ಹಾಗೂ ವರ್ಕಿಂಗ್ ಮಾಡೆಲ್ ವಿಭಾಗದಲ್ಲಿ ಜೈನ ಪಿಯು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

mbd_nov8_-3

ಪ್ರ್ರೌಢಶಾಲಾ ವಿಭಾಗದಲ್ಲಿ ಎಕ್ಸಲೆಂಟ್ ಹೈಸ್ಕೂಲ್ ವಿಭಾಗ ಎಲ್ಲಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯಿತು.ಸ್ಟಿಲ್ ಮಾಡೆಲ್ ವಿಭಾಗದಲ್ಲಿ ಮುಡುಬಿದಿರೆ ರೋಟರಿ ಪಿಯು ಕಾಲೇಜು ದ್ವಿತೀಯ, ಎಕ್ಸಲೆಂಟ್ ಪಿಯು ಕಾಲೇಜು ತಂಡ ತೃತೀಯ ಸ್ಥಾನ ಪಡೆದಿದೆ. ವರ್ಕಿಂಗ್ ಮಾಡೆಲ್ ವಿಭಾಗದಲ್ಲಿ ಎಕ್ಸಲೆಂಟ್ ಪಿಯು ಕಾಲೇಜು ದ್ವಿತೀಯ, ರೋಟರಿ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಪಡೆಯಿತು. ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ, ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಹಿಂದಿ ಪ್ರಾಧ್ಯಾಪಕ ವಿನಯ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *