ಬೆಂಗಳೂರು: ಸೂರಿ ನಿರ್ದೇಶನದ 25 ನೇ ಚಿತ್ರ  “ದೊಡ್ಮನೆ ಹುಡುಗ “ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದು ಪುನೀತ್ ಅವರ 25 ನೇ ಸಿನಿಮಾವಾದರಿಂದ ಅಭಿಮಾನಿಗಳು ಕೂಡಾ ಕಾತುರದಿಂದಿದ್ದಾರೆ. ಸಹಜವಾಗಿಯೇ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನ 25 ನೇ ಚಿತ್ರವನ್ನು ಅದ್ದೂರಿಯಗಿ ಸಂಭ್ರಮಿಸಲು ನಿರ್ಧರಿಸಿದ್ದಾರೆ. ಅದರ ಮೊದಲ ಹಂತವಾಗಿ ಪುನೀತ್ ರಾಜ್ ಕುಮಾರ್ ಅವರ ವಿವಿಧ ಬಗೆಯ ಕಟೌಟುಗಳನ್ನು ನಿಲ್ಲಿಸಲಾಗಿದೆ.

1475213701048

ವಿಶೇಷವೆಂದರೆ ಕೇವಲ ಪುನೀತ್ ಒಬ್ಬರ ಕಟೌಟು ಮಾತ್ರವಲ್ಲ  ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಕಟೌಟನ್ನು ಮಾಡಿಸಿದ್ದು ಪ್ರಸನ್ನ ಚಿತ್ರಮಂದಿರದಲ್ಲಿ ನಿಲ್ಲಿಸಲಾಗಿದೆ. ಇದರ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಬೇರೆ ಬೇರೆ ಚಿತ್ರಗಳ ಗೆಟಪ್ಗಳನ್ನು ಕಟೌಟು ಮಾಡಿಸಿದ್ದು ಪ್ರಸನ್ನ ಥಿಯೇಟರ್ ನಲ್ಲಿ ಒಟ್ಟು 9 ಕಟೌಟುಗಳನ್ನು ನಿಲ್ಲಿಸಲು ಅಭಿಮಾನಿಗಳು ನಿಧ್ರಿಸಿದ್ದಾರೆ. ಜೊತೆಗೆ ಸಿನಿಮಾ ಬಿಡುಗಡೆ ದಿನ ಈ ಕಟೌಟುಗಳಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಲು ಅಭಿಮಾನ ಸಂಘಗಳು ನಿರ್ಧರಿಸಿವೆ. ಜೊತೆಗೆ ಅಭಿಮಾನಿ ಸಂಘಗಳು ಅ.5ರಂದು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ವಾಗತಿಸಿ ಅವರಿಗೆ ವಿಶೇಷ ಬಿರುದನ್ನು ನೀಡಲಿವೆ.

By suddi9

Leave a Reply

Your email address will not be published. Required fields are marked *