ವಿಟ್ಲ: ಜೇಸಿಐ ಇದರ ವತಿಯಿಂದ ಜೇಸಿಐ ಸಪ್ತಾಹದ ಅಂಗವಾಗಿ ಯಕ್ಷ ಸಿಂಧೂರ ಪ್ರತಿಷ್ಠಾನ ಇವರಿಂದ `ಸ್ಯಮಂತಕ ಮಣಿ’ ಎಂಬ ಯಕ್ಷಗಾನ ತಾಳ ಮದ್ದಳೆಯು ವಿಟ್ ಮಾದರಿ ಶಾಲೆಯಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಉಂಡೆಮನೆ ಕೃಷ್ಣ ಭಟ್, ಪ್ರಭಾ ಚಣಿಲ, ಪ್ರಕಾಶ್ ವಿಟ್ಲ ಮತ್ತು ಅಭಿಷೇಕ್ ಚಣಿಲ, ಅರ್ಥಧಾರಿಗಳಾಗಿ ಪಕಳಕುಂಜ ಶ್ಯಾಂ ಭಟ್, ಚಣಿಲ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಕುಮಾರ್ ಬಳ್ಳೂರು ಮತ್ತು ಪಶುಪತಿ ಶಾಸ್ತ್ರಿ ಭಾಗವಹಿಸಿದ್ದರು. ಜೇಸಿಐ ಅಧ್ಯಕ್ಷ ಬಾಬು ಕೆ ವಿ ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

