ಮಂಗಳೂರು: ಯೇನೆಪೊಯಾ ಸಂಶೋಧನಾ ಕೇಂದ್ರ, ಯೇನೆಪೊಯ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಪ್ರಯೋಗಾಲಯ, ಮೂತ್ರಪಿಂಡ ಶಾಸ್ತ್ರ ಮತ್ತು ಮೂತ್ರಶಾಸ್ತ್ರ ವಿಭಾಗಗಳು ಜಂಟಿಯಾಗಿ ಅಂಗಾಂಗ ಕಸಿಯಲ್ಲಿ ಹೊಂದಾಣಿಕೆ ಪರೀಕ್ಷೆ ಎಂಬ ಕಾರ್ಯಾಗಾರವನ್ನು 15 ಸೆಪ್ಟೆಂಬರ್ 2016 ರಂದು ಆಯೋಜಿಸಿತ್ತು. ಯೇನೆಪೊಯಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಜಿ. ಶ್ರೀಕುಮಾರ್ ಮೆನನ್ ಈ ಕಾರ್ಯಾಗಾರವನ್ನು ಉದ್ಘಾಟಿಸಿದರು.

dsc_0485-croped-1

ಈ ಕಾರ್ಯಾಗಾರದಲ್ಲಿ ಮೂತ್ರಪಿಂಡ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊ. ಆದ ಡಾ. ಸಂತೋಷ್ ಪೈ ರವರು ಮೂತ್ರಪಿಂಡಗಳ ಕಸಿಯಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಮೂತ್ರಪಿಂಡದ ದಾನದ ಪ್ರಾಮುಖ್ಯತೆಯನ್ನು ತಿಳಿಸಿದರು.

ಈ ಕಾರ್ಯಾಗಾರದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾದ ಡಾ. ಅಂಕಿತ್ ಮಾಥುರ್ ರೋಟರಿ ಟಿ.ಟಿಕೆ ರಕ್ತ ನಿಧಿ ಬೆಂಗಳುರು ಇವರು “ಸಿರೊಲೊಜಿಕಲ್ ಮತ್ತು ಮೊಲಿಕ್ಯುಲಾರ್ ಎಚ್.ಎಲ್.ಎ. ವರ್ಗೀಕರಣದ ಮೂಲಕ ದಾನಿ ಸ್ವೀಕರಿಸುವವರ ಅಂಗ ಹೊಂದಾಣಿಕೆ” ಕುರಿತು ಉಪನ್ಯಾಸ ನೀಡಿದರು. ಈ ಸಿಡಿಸಿ ಸೌಲಭ್ಯವು ಸಧ್ಯದಲ್ಲಿಯೇ ಪ್ರತಿಷ್ಠಿತ ಎನ್. ಎ. ಬಿ. ಎಲ್. ಮಾನ್ಯತೆಯನ್ನು ಪಡೆಯಲಿದೆ. ಈ ಸೌಲಭ್ಯವು ದ.ಕ. ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿದ್ದು ರೋಗಿಗಳಿಗೆ ಯಶಸ್ವಿಯಾಗಿ ಅಂಗಾಂಗ ಕಸಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.

By suddi9

Leave a Reply

Your email address will not be published. Required fields are marked *