ಮಂಗಳೂರು: ಕರ್ನಾಟಕ ಘನ ಸರ್ಕಾರವು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸರಕಾರ ಆದೇಶ ಕ್ರ.ಸಂ. ವಾಪ್ರ: 172 ಕರ ಅ:2007,ಬೆಂಗಳೂರು ದಿನಾಂಕ 3-10-2007 ರಂತೆ ಅಧಿಕೃತವಾಗಿ ಘೋಷಿಸಿದೆ.

ಬ್ಯಾರಿ ಭಾಷೆ ಮಾತನಾಡುವ ಸುಮಾರು 20 ಲಕ್ಷಕ್ಕೂ ಮೇಲ್ಪಟ್ಟ ಜನರಿದ್ದು, “ಬ್ಯಾರಿ ಸಾಹಿತ್ಯ ಅಕಾಡೆಮಿ” ಘೋಷಿಸುವ ಮೂಲಕ ಕರ್ನಾಟಕ ಸರಕಾರವು ಬ್ಯಾರಿ ಭಾಷೆಗೆ ಅಧಿಕೃತ ಸರಕಾರಿ ಮನ್ನಣೆ ನೀಡಿದ್ದು, ಅಕ್ಟೋಬರ್ 3 ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ‘ಬ್ಯಾರಿ ಭಾಷಾ ದಿನ’ ವನ್ನಾಗಿ ಘೋಷನೆ ಮಾಡಿವೆಯಲ್ಲದೆ, ಬ್ಯಾರಿ ಭಾಷೆಯ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಕ್ಟೋಬರ್ 3 ರಂದು ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ  2016 ಸಪ್ಟೆಂಬರ್ 26 ರಿಂದ ‘ಬ್ಯಾರಿ ಭಾಷಾ ಸಪ್ತಾಹ’  ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆಯನ್ನು ಅಕ್ಟೋಬರ್ 2 ರಂದು ಮಂಗಳೂರಿನ ಅತ್ತಾವರದ ಪ್ರಿಸೀಡಿಯಮ್ ಕಾಂಪ್ಲೆಕ್ಸಿನಲ್ಲಿರುವ ಅಕಾಡೆಮಿಯ ಕಛೇರಿಯಲ್ಲಿ ಏರ್ಪಡಿಸಿದೆ. ವಿಜೇತರಿಗೆ ನಗದು ಬಹುಮಾನ ಪ್ರಥಮ ರೂ.1,000/- , ದ್ವಿತೀಯ ರೂ.750/-, ತೃತೀಯ ರೂ.500/- ನೀಡಲಾಗುವುದು. ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ 2016 ರ ಅಕ್ಟೋಬರ್ 1 ರೊಳಗೆ ಈ ಕೆಳಗಿನ ವಿಳಾಸಕ್ಕೆ ನೊಂದಾಯಿಸಲು ಕೋರಲಾಗಿದೆ.

ವಿಳಾಸ: ಅಧ್ಯಕ್ಷರು(ರಿ), ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರಿಸಿಡಿಯಮ್ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ, ನಂದಿಗುಡ್ಡೆ ರಸ್ತೆ, ಮಂಗಳೂರು-575001.

ಮಾಹಿತಿಗೆ ದೂರವಾಣಿ ಸಂಖ್ಯೆ: 0824-2412297, 4260038 ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ (ರಿ) ಉಮರಬ್ಬ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *