ಸುದ್ದಿ9:ಮಂಗಳೂರು ಸಬ್ಜೈಲಲ್ಲಿ ಮತ್ತೆ ಮಾರಾಮಾರಿ!
ಖೈದಿಯ ಮೇಲೆ ಸಹಖೈದಿಗಳಿಂದ ಮಾರಣಾಂತಿಕ ಹಲ್ಲೆ
ಮಂಗಳೂರು: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುಲ್ಲಿರುವ ಮಂಗಳೂರು ಸಬ್ಜೈಲ್ನಲ್ಲಿ ಮಂಗಳವಾರ ಮಧ್ಯಾಹ್ನ ಮತ್ತೆ ಖೈದಿಗಳ ನಡುವೆ ಹೊಡೆದಾಟ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ಖೈದಿಯೊಬ್ಬನ ಮೇಲೆ ಸಹಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣವೊಂದರ ಆರೋಪಿ ಶೈಲೇಶ್(45) ಹಲ್ಲೆಗೊಳಗಾದವನು. ಈತನಿಗೆ ಸಹಖೈದಿಗಳು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಶೈಲೇಶ್ ಮುಖದ ಭಾಗಕ್ಕೆ ಗಂಭೀರ ಏಟು ತಗಲಿದೆ. ಕೂಡಲೇ ಜೈಲು ಅಧಿಕಾರಿಗಳು ಶೈಲೇಶ್ನನ್ನು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸಬ್ಜೈಲ್ನಲ್ಲಿ ಖೈದಿಗಳ ಸ್ಥಳಾಂತರ ಸಂದರ್ಭ ಪೊಲೀಸರ ಮೇಲೆಯೇ ಖೈದಿಗಳು ಏರಿಹೋಗಿದ್ದಲ್ಲದೆ ದಾಂಧಲಇಲಾೆ ನಡೆಸಿದ್ದರು. ಆನಂತರ ಜೈಲಿನಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತು ಕೂಡಾ ಪತ್ತೆಯಾಗಿತ್ತು. ಇದೀಗ ಮತ್ತೆ ಜೈಲಲ್ಲಿ ಮಾರಾಮಾರಿ ನಡೆದಿದ್ದು ಜೈಲಲ್ಲಿ ರೌಡಿಗಳ ನಡುವಿನ ವೈಷಮ್ಯ, ಹಗೆತನ ಹೆಚ್ಚುತ್ತಿರುವ ಸೂಚನೆಯನ್ನು ನೀಡಿದೆ.
