ಮಂಗಳೂರು: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ಕ್ ಪೇಸ್ ಫೋರಂ ಹಾಗೂ ಇಗ್ನೈಟೆಡ್ ಮೈಂಡ್ಸ್ ಆಫ್ ಇಲೆಕ್ಟ್ರಾನಿಕ್ಸ್ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಗುರಿ ನಿರ್ಧರಿಸುವ ತಂತ್ರಗಾರಿಕೆ”ಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಆಗಸ್ಟ್ 26ರಂದು ಆಯೋಜಿಸಲಾಗಿತ್ತು.
ಎನ್.ಐ.ಟಿ.ಕೆ, ಸುರತ್ಕಲ್ ನ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಆದಂತಹ ಡಾ|| ಉದಯ ಕುಮಾರ್ ಆರ್.ವಿ. ಯವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಗರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಜೀವನದಲ್ಲಿ ತಮ್ಮ ಜೀವನದ ಗುರಿಯನ್ನು ನಿರ್ಧರಿಸಿ, ಅದರಂತೆ ಮುಂದುವರೆದು ತಮ್ಮ ಕಾರ್ಯ ಸಾಧನೆಗೊಳಿಸುವ ವಿಷಯದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಮತ್ತು ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಆಂ್ಯಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದಂತಹ ಅಬ್ದುಲ್ಲಾ ಗುಬ್ಬಿ ಹಾಗೂ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದಂತಹ ಡಾ|| ಕೃಷ್ಣಪ್ರಸಾದ್ ಎನ್. ಉಪಸ್ಥಿತರಿದ್ದರು.
ಜೂನ್-ಜುಲೈ ತಿಂಗಳಿನಲ್ಲಿ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳಿಸಿದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳನ್ನು ಹಾಗೂ ಆಯಾಯ ಸೆಮಿಸ್ಟರ್ನಲ್ಲಿ ರ್ಯಾಂಕ್ ಪಡೆದ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರೊ ಶೈನಿ ಮ್ಯಾಥ್ಯೂ ಸ್ವಾಗತಿಸಿದರು. ಡಾ|| ಅಬ್ದುಲ್ಲಾ ಗುಬ್ಬಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಡಾ|| ಎನ್. ಕೃಷ್ಣ ಪ್ರಸಾದ್ ವಂದಿಸಿದರು.
ವಿದ್ಯಾರ್ಥಿಗಳಾದ ಫಾತಿಮತ್ ತಸ್ರೀನ್ ಮತ್ತು ಸಹದಿಯ ನಿಶಾ ಕಾರ್ಯಕ್ರಮ ನಿರೂಪಿಸಿದರು.
