ಬಂಟ್ವಾಳ: ವಾಹನವೊಂದರಲ್ಲಿ ದನ ಸಾಗಾಟ ಮಾಡುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ವಿಟ್ಲ ಪೋಲೀಸರ ತಂಡ ದಾಳಿ ನಡೆಸಿ ವಾಹನ ಸಹಿತ ಇಬ್ಬರು ಆರೋಪಿಗಳ ಜತೆಗೆ 4 ಎತ್ತು, 1 ದನವನ್ನು ವಶಕ್ಕೆ ಪಡೆದ ಘಟನೆ ಮಾಣಿ ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.ಹಾಸನ ಮೂಲದ ಅರಸೀಕೆರೆ ನಿವಾಸಿಗಳಾದ ಶಿವಶಂಕರ (27), ಸಂತೋಷ (30) ಬಂಧಿತ ಆರೋಪಿಗಳಾಗಿದ್ದಾರೆ. ಉದನೆ ಗ್ಯಾಸ್ ಟ್ಯಾಂಕರ್ ಅಪಘಾತದಿಂದ ವಾಹನ ಸಂಚಾರ ಸುಗಮಹೊಳಿಸುತ್ತಿದ್ದ ಪೋಲೀಸರ ತಂಡಕ್ಕೆ ಹಾಸನ ಕಡೆಯಿಂದ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ರೀತಿಯಲ್ಲಿ ವಾಹನವೊಂದರಲ್ಲಿ ದನ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಹಾಸನ ಸಂತೆಯಿಂದ ಪರಂಗಿಪೇಟೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಪೋಲೀಸ್ ಸಹಾಯಕ ಉಪನಿರೀಕ್ಷಕ ಕೊರಗಪ್ಪ, ಸಿಬ್ಬಂದಿಗಳಾದ ಚಿದಾನಂದ ರೈ, ಭವಿತ್ ರೈ, ಗೃಹರಕ್ಷಕ ದಳದ ಸಿಬ್ಬಂದಿ ಜಯಂತ ಅವರು ಭಾಗವಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *