ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಟ್ಲ ಜೆಸಿಐ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವಿಟ್ಲ ಠಾಣೆ ಇದರ ವತಿಯಿಂದ ಪೋಕ್ಸೋ ಮಾಹಿತಿ ಶಿಬಿರ 22-07-2016 ರಂದು ನಡೆಸಲಾಯಿತು. ಮಂಗಳೂರಿನ ಚೈಲ್ಡ್ ವೆಲ್‍ಫೇರ್ ಕಮಿಟಿ ಸದಸ್ಯೆ ಕಸ್ತೂರಿ ಬೊಳ್ವಾರ್ ಮಾಹಿತಿ ನೀಡಿದರು. ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ವಿಟ್ಲ ಆರಕ್ಷಕ ಠಾಣೆಯ ಎ ಎಸ್ ಐ ರುಕ್ಮಯ್ಯ ಮೂಲ್ಯ, ಜೆಸಿಐ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ, ನೇಷನಲ್ ಹ್ಯೂಮನ್ ರೈಟ್ ಸೆಂಟರಿನ ರಾಜ್ಯ ಕಾರ್ಯದರ್ಶಿ ಪ್ರೇಮಿ ಫೆರ್ನಾಂಡಿಸ್ ಭಾಗವಹಿಸಿದ್ದರು. ಜೆಸಿಯ ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಾಂಶುಪಾಲ ಆದರ್ಶ ಎ ಎಸ್ ಸ್ವಾಗತಿಸಿದರು. ಅಣ್ಣಪ್ಪ ಸಾಸ್ತಾನ ವಂದಿಸಿದರು.
