ಬಜಪೆ: ಶಿಕ್ಷಣಕ್ಕಾಗಿ ನೆರವು ನೀಡುವುದು ಸ್ತುತ್ಯಾರ್ಹ ಸಾಮಾಜಿಕ ಕಳಕಳಿಯ ಸೇವೆ ಶೈಕ್ಷಣಿಕ ಸಾಧನೆ ತೋರಿದ “ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು “ವಿದ್ಯಾರ್ಥಿಗಳ ಸಾಧನೆ ಪ್ರೇರಣೆಯಾಗುತ್ತದೆ. ಅರ್ಥಿಕ ಸಂಕಷ್ಟ ಮಕ್ಕಳ “ವಿದ್ಯಾರ್ಜನೆಗೆ ತೊಡಕಾಗಬಾರದು ಎಂದು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ಹಾಗೂ ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ “ವಿಜಯನಾಥವಿಠಲ ಶೆಟ್ಟಿ ಅವರು ಹೇಳಿದರು.
13 vm Banta
ಅವರು ಭಾನುವಾರ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದ ಸಭಾಂಗಣದಲ್ಲಿ ಬಜಪೆ ವಲಯದ 15 ಗ್ರಾಮಗಳ ವ್ಯಾಪ್ತಿಯ ಬಂಟ ಸಮಾಜದ ಮಕ್ಕಳಿಗೆ “ವಿದ್ಯಾರ್ಥಿವೇತನ ವಿತರಿಸಿ ಮಾನಾಡಿದರು. 15 ಗ್ರಾಮದ 40 ಮಕ್ಕಳಿಗೆ ರೂ.1ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾುತು.
ಇದೇ ಸಂದರ್ಭ ಮಂಗಳೂರು ತಾಲುಕು ಪಂಚಾಯತಿಗೆ ನೂತನವಾಗಿ ಸಂಘದ ವ್ಯಾಪ್ತಿಯಲ್ಲಿ ಆಯ್ಕೆಯಾದ ಸುಪ್ರಿತಾ ಶೆಟ್ಟಿ ಮರವೂರು, ನಾಗೇಶ್ ಶೆಟ್ಟಿ ಕುಪ್ಪೆಪದವು ಹಾಗೂ “ಶ್ವನಾಥ ಶೆಟ್ಟಿ ಕೊಳಂಬೆ ಅವರುಗಳನ್ನು ಸನ್ಮಾನಿಸಲಾುತು.

ಈ ಬಾರಿಯ ಎಸ್ಸೆಸ್ಸೆಲ್ಸಿ, ಸಿಬಿಎಸ್ಇ 10ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90 ಶೇಕಡಾ ಹಾಗೂ ಅಂಕ ಪಡೆದು ತೇರ್ಗಡೆಯಾದ 10 ಮಕ್ಕಳನ್ನು ಅಭಿನಂದಿಸಿ ಪುರಸ್ಕರಿಸಲಾುತು.
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಿತೇಶ್ ಶೆಟ್ಟಿ ವೇದಿಕೆಯಲ್ಲಿದ್ದರು.
ಸಂಘದ ಕಾರ್ಯದರ್ಶಿ ಸುಖೇಶ್ ಮಾಣಾ ಸ್ವಾಗತಿಸಿದರು. ಆರ್.ಎನ್.ಶೆಟ್ಟಿ ನೂತನ ತಾ.ಪಂ. ಸದಸ್ಯರನ್ನು ಪರಿಚುಸಿದರು. ಹರೀಶ್ ಶೆಟ್ಟಿ ಸುಂಕದಕಟ್ಟೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿ ವೇತನದ ವಿವರ ನೀಡಿದರು. ಗಂಗಾಧರ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *