ಮಂಗಳೂರು, ವಿಶ್ವಮಟ್ಟದ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ಆಕಾಂಕ್ಷೆಯೊಂದಿಗೆ ಹೊಸ ಕಲಿಕಾ ಪದ್ಧತಿಯೊಂದಿಗೆ ಸ್ಥಾಪಿಸಲಾದ ಪನ ಎಜ್ಯುಕೇಶನ್ ಸಂಸ್ಥೆಯ ಕ್ಯಾಂಪಸ್ ಉದ್ಘಾಟನಾ ಸಮಾರಂಭ ಗಣ್ಯರ ಉಪಸ್ಥಿತಿಯೊಂದಿಗೆ ಮೇ 15ರಂದು ಭಾನುವಾರ ನಡೆಯಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ಕೊಳಂಬೆ ಗ್ರಾಮದ ಪ್ರಕೃತಿದತ್ತವಾದ ಸುಂದರ ಪರಿಸರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಗ್ರೀನ್ ಕ್ಯಾಂಪಸಿನಲ್ಲಿ ಪದವಿಪೂರ್ವ ಕಾಲೇಜು ಮೊದಲ ವರ್ಷ ಪೂರೈಸಿದೆ.

CENT0864
ಜಾಗತಿಕ ಗುಣಮಟ್ಟದ ಪನ ವಿಶ್ವವಿದ್ಯಾಲಯ ರೂಪಿಸುವ ದೂರದೃಷ್ಟಿಯೊಂದಿಗೆ ಆರಂಭಿಸಲಾದ ಪನ ಎಜ್ಯುಕೇಶನ್ ಕ್ಯಾಂಪಸ್ಸಿಗೆ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಕ್ಯಾಂಪಸ್ ಹಾಗೂ ಶಿಕ್ಷಣ ಸೌಲಭ್ಯಗಳನ್ನು ಪರಿಚಯಮಾಡಿಕೊಳ್ಳಲು ತುಂಬು ಹೃದಯದ ಸ್ವಾಗತವನ್ನು ಪನ ಎಜ್ಯುಕೇಶನ್ ಟ್ರಸ್ಟಿ ಪ್ರಸಾದ್ ಹೆಗ್ಡೆ ಬಯಸಿದ್ದಾರೆ.
ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಕುಲಪತಿ ಡಾ. ದರ್ಶನ್ ಶಂಕರ್, ರಾಜ್ಯ ಸರಕಾರದ ಸಚಿವರಾದ ಬಿ.ರಮಾನಾಥ ರೈ ಮತ್ತು ಯು.ಟಿ.ಖಾದರ್, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಎಜೆ ಗ್ರೂಪ್ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ, ನಿಟ್ಟೆ ವಿವಿ ಪೆÇ್ರ ಚಾನ್ಸಲರ್ ಡಾ.ಶಾಂತರಾಮ ಶೆಟ್ಟಿ, ಆಳ್ವಾಸ್ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಾ ಸುವರ್ಣ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಜ್ಞಾನ, ಕಲೆ ಮತ್ತು ವಾಣಿಜ್ಯಶಾಸ್ತ್ರದಲ್ಲಿ ಪಿಯು ಶಿಕ್ಷಣ ನೀಡುತ್ತಿರುವ ಕೊ-ಎಜ್ಯುಕೇಶನ್ ರೆಸಿಡೆನ್ಸಿಯಲ್ ಪನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸುಗಳನ್ನು ಆಯ್ಕೆ ಮಾಡಲು ಕೌನ್ಸೆಲಿಂಗ್, ನೀಟ್ ಮುಂತಾದ ಪ್ರವೇಶ ಪರೀಕ್ಷೆಗಳ ತಯಾರಿಗೆ ತರಬೇತಿ, ವಿದ್ಯಾರ್ಥಿಗಳಲ್ಲಿ ಮೂಡುವ ಕುತೂಹಲ, ಸಂಶಯಗಳಿಗೆ ಉತ್ತರ ನೀಡಲು ನುರಿತ ಶಿಕ್ಷಕರ ಸಹಾಯ ಇತ್ಯಾದಿ ಹಲವಾರು ಶೈಕ್ಷಣಿಕ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ.
ಪನ ಎಜ್ಯುಕೇಶನ್ ಸಂಸ್ಥೆ ತನ್ನದೇ ಆದ ವಿಶಿಷ್ಟ ಕಲಿಕಾ ಪದ್ಧತಿ ಪನ ಓನ್ ನವೀನ ಕಲಿಕಾ ವಿಧಾನ ವಿದ್ಯಾರ್ಥಿಗಳಿಗೆ ಅನುಭವ ನೀಡುವ ಪ್ರಯೋಗ ಮಾಡಲು ಅವಕಾಶ ನೀಡುವ ಮೂಲಕ ಹೊಸದನ್ನು ಕಲಿಯುವ, ಅವಲೋಕಿಸುವ, ವಿಶ್ಲೇಷಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಪ್ರಚೋದಿಸಲಾಗುತ್ತದೆ
ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಸುವ ಮೂಲಕ ಕಲಿಕೆಯನ್ನು ಸರಳ ಮತ್ತು ಸುಲಭ ಮಾಡಲಾಗಿದ್ದು, ಸ್ವತಃ ಪ್ರಯೋಗದ ಮೂಲಕ ಕಲಿಯುವ ಸೌಲಭ್ಯ ಮತ್ತು ಮಾರ್ಗದರ್ಶನವನ್ನು ಪನ ಕ್ಯಾಂಪಸ್ಸಿನಲ್ಲಿ ನೀಡಲಾಗುತ್ತದೆ.
ಪನ ಎಜ್ಯುಕೇಶನ್ ಸಂಸ್ಥೆಯು ಅರ್ಹ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ ಶಿಪ್, ಅವಾರ್ಡ್ಸ್, ಗ್ರಾಂಟ್ಸ್ ಮತ್ತು ಎಕ್ಸ್ ಚೇಂಜ್ (ಸೇಜ್) ಕಾರ್ಯಕ್ರಮದಂತೆ ಬಜಪೆ ಆಸುಪಾಸಿನ ಆಯ್ದ ವಿದ್ಯಾರ್ಥಿಗಳಿಗೆ ಕನಿಷ್ಟ ಶುಲ್ಕದೊಂದಿಗೆ ಪನ ಪಿಯು ಕಾಲೇಜಿಗೆ ಪ್ರವೇಶ ನೀಡಲು ಪನ ಎಜ್ಯುಕೇಶನ್ ಹೆಮ್ಮೆಪಡುತ್ತದೆ.
ಎರಡನೇ ಪಿಯು ವಿಜ್ಞಾನ ವಿಭಾಗದ ಹತ್ತು ಮಂದಿ ಅರ್ಹ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವ ನೂರು ಶೇಕಡ ಶಿಷ್ಯವೇತನವನ್ನು ನೀಡಲಾಗುವುದು.

By suddi9

Leave a Reply

Your email address will not be published. Required fields are marked *