ಬಜ್ಪೆ: ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಎಷ್ಟು ಬೇಕೋ ಅಷ್ಟು ಪ್ರೋತ್ಸಾಹವನ್ನು ನಾವು ಕೊಡಬಹುದು, ಆದರೆ ವಿದ್ಯೆ ಎಂಬುವುದನ್ನು ವಿದ್ಯಥರ್ಿಗಳಾದವರು ತನ್ನ ಸ್ವಪ್ರಯತ್ನದಿಂದಲೇ ಪಡೆಯಬೇಕು. ಮಕ್ಕಳು ಉತ್ತಮ ವಿದ್ಯೆ ಪಡೆಯಬೇಕಾದರೆ ಪೋಷಕರ ಪಾತ್ರವೂ ಹಿರಿದೆಂಬುವುದನ್ನು ಮರೆಯಬಾರದು ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹೇಳಿದರು.
ಅವರು ಭಾನುವಾರ ನಡೆದ ವಿವಿಧ ಸಂಘಸಂಸ್ಥೆಗಳ ನೆರವಿನಿಂದ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಮಳಲಿ ಇಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡುತ್ತಿದ್ದರು.

govt school malali

DSC00632

DSC00635

DSC00644

DSC00659

DSC00660

DSC00661

DSC00662

DSC00664
ಪ್ರಾಥಮಿಕ ಶಾಲೆಯನ್ನು ಹೊಂದಿದ್ದ ಮಳಲಿಗೆ ಪ್ರೌಢ ಶಾಲೆಯ ಕೊರತೆ ಅನುಭವಿಸಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ ಇಲ್ಲಿನ ಹಿರಿಯರ ಪ್ರಯತ್ನವಾಗಿ ಪ್ರೌಢ ಶಾಲೆ ನಿಮರ್ಾಣವಾಗಿದೆ. ನೂರು ವರ್ಷಗಳನ್ನು ಮೀರಿದ ಈ ಶಾಲೆಇಂದು ಶೈಕ್ಷಣಿಕವಾಗಿ ಮುಂದುವರಿಯಲು ಇಲ್ಲಿನ ಶಿಕ್ಷಕರೇ ಕಾರಣರಾಗಿದ್ದಾರೆ. ನಾನೂ ಕೂಡಾ ಇದೇ ಶಾಲೆಯಲ್ಲಿ ಕಲಿತಿದ್ದು ಮೂರು ವರ್ಷದವನಾಗಿದ್ದಾಗ ಕಲಿತ ಅಕ್ಷರದ ನೆನಪೂ ಇಂದೂ ನನ್ನ ಮನಸ್ಸಿನಿಂದ ಮಾಸಿಲ್ಲ ಎಂದು ಹೇಳಿದ್ದಾರೆ.
ನಂತರ ಮಾತಾಡಿದ ಮೆಸ್ಕಾಂ ಅಧಿಕಾರಿಯಾಗಿರುವ ಸೋಹನ್ ಅಧಿಕಾರಿ, ಕಳೆದ ವರ್ಷದಿಂದ ಬೇರೆ ಬೇರೆ ಸಂಘಟನೆಗಳು ಅಲ್ಲಿನ ವ್ಯಾಪ್ತಿಯ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಗುತ್ತಿತ್ತು. ಆದರೆ ಎಲ್ಲಾ ವಿದ್ಯಾಥರ್ಿಗಳಿಗೆ ಪುಸ್ತಕ ಸಿಗಬೇಕು ಎಂಬುವುದನ್ನು ವಿವಿಧ ಸಂಘಟನೆಗಳಿಗೆ ಮನವರಿಕೆ ಮಾಡಿದಾಗ ಎಲ್ಲಾ ಸಂಘಟನೆಗಳು ಸಂತೋಷದಿಂದ ಒಪ್ಪಿಕೊಂಡು ಅವರೇ ಮುಂದಾಗಿ ಧನಸಹಾಯ ನೀಡಿದ್ದಾರೆ. ಇದರಿಂದಾಗಿ ಇಂದು ಶಾಲೆಯ ಎಲ್ಲಾ ಮಕ್ಕಳು ಪುಸ್ತಕ ಪಡೆಯುವಂತಾಗಿದೆ. ಅಲ್ಲದೆ ಈ ಶಾಲೆಯಲ್ಲಿ ಅತಿ ಹೆಚ್ಚು ವಿದ್ಯಾಥರ್ಿಗಳಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಮಳಲಿಯಲ್ಲಿ ಪದವಿ ಪೂರ್ವ ಕಾಲೇಜ್ ನಿಮರ್ಾಣಕ್ಕೆ ಪ್ರಯತ್ನ: ಉದ್ಯಮಿ ನೌಷಾದ್
ಉದ್ಯಮಿ ಹಾಗೂ ಇದೇ ಶಾಲೆಯ ಹಳೆ ವಿದ್ಯಾಥರ್ಿಯಾಗಿರುವ ನೌಷಾದ್ ಗಂಜಿಮಠ ಮಾತಾಡಿ, ಮಳಲಿಯಲ್ಲಿ ಪದವಿಪೂರ್ವ ಕಾಲೇಜ್ ಇಲ್ಲ. ಮುಂದಿನ ವರ್ಷದಲ್ಲಿ ಇಲ್ಲಿ ಪದವಿಪೂರ್ವ ಕಾಲೇಜ್ ನಿಮರ್ಾಣವಾಗಬೇಕು. ಅದಕ್ಕಾಗಿ ನನ್ನೆಲ್ಲಾ ಪ್ರಯತ್ನವನನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸುಮಾರು 540 ಮಕ್ಕಳಿಗೆ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಪುಸ್ತಕವನ್ನು ವಿತರಿಸಲಾಯ್ತು. ಮಕ್ಕಳ ಪುಸ್ತಕ ಖರೀದಿಸಲೆಂದೇ ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಮಾತಾಡಲಾಯ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು ಸಹಭಾಗಿಗಳಾಗಿದ್ದವು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜಪ್ಪ, ಸಹಶಿಕ್ಷಕ ಶ್ರೀಪತಿ, ಮಳಲಿ ಜುಮಾ ಮಸೀದಿಯ ಅಧ್ಯಕ್ಷ ಎಂ.ಕೆ ಮುಹಮ್ಮದ್, ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮೋಹನ್ದಾಸ್ ಎಂ., ವಜ್ರಾಕ್ಷ ಹಾಗೂ ಹಲವಾರು ಸಂಘಟನೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *