ಮುಂಬಯಿ,: ಅಖಿಲ ಭಾರತ ತುಳು ಒಕ್ಕೂಟ ಇದರ 26ನೇ ವಾರ್ಷಿಕ ಮಹಾ ಸಭೆಯು ಕಳೆದ ಭಾನುವಾರ ಮಂಗಳೂರು ಕಾವೂರು ಅಲ್ಲಿನ ಒಕ್ಕೂಟದ ಸ್ವಂತ ಕಛೇರಿಯಲ್ಲಿ ಜರುಗಿಸಲ್ಪಟ್ಟಿತು. ಮಹಾಸಭೆಯಲ್ಲಿ 2016-2019ನೇ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಅಧ್ಯಕ್ಷರಾಗಿ ಧರ್ಮಪಾಲ ಯು.ದೇವಾಡಿಗ ಅವರನ್ನು ಸಭೆಯು ಪುನಾರಾಯ್ಕೆ ಗೊಳಿಸಿತು.

ಗೌರವಾಧ್ಯಕ್ಷರಾಗಿ ಲ… ಜಯಕರ ಶೆಟ್ಟಿ ಇಂದ್ರಾಳಿ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ನಿಟ್ಟೆ ಶಶಿಧರ ಶೆಟ್ಟಿ ಮತ್ತು ಗೌರವ ಪ್ರಧಾನ ಕೋಶಾಧಿಕಾರಿ ಆಗಿ ಕರುಣಾಕರ ಶೆಟ್ಟಿ ಮೂಲ್ಕಿ ಅವರನ್ನು ಸರ್ವಾನುಮತದಿಂದ ಆಯ್ಕೆ ನಡೆಸಿತು.

Dharmapal Devadiga-1

ಇತರ ಪದಾಧಿಕಾರಿಗಳಾಗಿ ಲ… ದಿವಾಕರ ಶೆಟ್ಟಿ ಸಾಂಗ್ಲಿ, ವಿಜಯಕುಮಾರ್ ಜೋಗಿ ಕುಲಶೇಖರ, ಶ್ರೀನಿವಾಸ ಮಾಂಕುಡೆ, ದಾಮೋದರ ನಿಸರ್ಗ, ಭಾಸ್ಕರ್ ಶೆಟ್ಟಿ ಸಕಲೇಶಪುರ, ವಿಜಯಲಕ್ಷಿ ್ಮೀ ಬಿ.ಶೆಟ್ಟಿ ಮಂಗಳೂರು, ಡಾ… ರಾಜೇಶ್ ಆಳ್ವ ಬದಿಯಡ್ಕ (ಉಪಾಧ್ಯಕ್ಷರು), ಪಿ.ಎ ಪೂಜಾರಿ, ಸತೀಶ್ ಸಾಲ್ಯಾನ್ ಕಾಸರಗೋಡು, (ಜೊತೆ ಕಾರ್ಯದರ್ಶಿಗಳು), ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಚೇಂಡ್ಲ, ಕಾಂತಿ ಶೆಟ್ಟಿ ಬೆಂಗಳೂರು, ಚಂದ್ರಹಾಸ ದೇವಾಡಿಗ ಮೂಡಬಿದ್ರೆ (ಸಂಘಟನಾ ಕಾರ್ಯದರ್ಶಿಗಳು) ಮತ್ತಿತರ ಪದಾಧಿಕಾರಿಗಳ ಆಯ್ಕೆ ನಡೆಸಲ್ಪಟ್ಟಿತು.

ಸಭೆಯಲ್ಲಿ ಹಿರಿಯರಾದ ಅಡ್ಯಾರು ಮಹಾಬಲ ಶೆಟ್ಟಿ, ಎ.ಸಿ ಭಂಡಾರಿ, ನಿರ್ಗಮನ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ರತ್ನಕುಮಾರ್, ಎಂ.ಎಸ್ ಶೆಟ್ಟಿ, ಪ್ರದೀಪ್ ಆಳ್ವ, ಲೀಲಾಧರ್ ಕರ್ಕೆರ, ಮತ್ತಿತರ ಗಣ್ಯರು, ಸದಸ್ಯರನೇಕರು ಉಪಸ್ಥಿತರಿದ್ದು, ಧರ್ಮಪಾಲ ಯು.ದೇವಾಡಿಗ ಸ್ವಾಗತಿಸಿದರು. ಸಭಾ ಕಲಾಪ ನಡೆಸಿದರು. ನಿಟ್ಟೆ ಶಶಿಧರ ಶೆಟ್ಟಿ ಅಭಾರ ಮನ್ನಿಸಿದರು.

By suddi9

Leave a Reply

Your email address will not be published. Required fields are marked *