ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಬದನಡಿ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ನಾಗಶಿಲಾ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಪಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು.
ಪೆಜಕ್ಕಳ ಗಂಗಾಧರ ಕಕೃಣ್ಣಾಯ ಇವರ ಪೌರೋಹಿತ್ಯದಲ್ಲಿ ಗುರುವಾರ ಬೆಳಿಗ್ಗೆ ನಾಗಶಿಲಾ ಪುನರ್ ಪ್ರತಿಷ್ಠೆ, ರಕ್ತೇಶ್ವರಿ ಮತ್ತು ಬೊಬ್ಬರ್ಯ ದೈವ ಪ್ರ್ರತಿಷ್ಠೆ, ನಾಗಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಆಶ್ಲೇಷಾ ಬಲಿ ಪೂಜೆ, ಮಹಾಪೂಜೆ ನೆರವೇರಿಸಿದರು.
31btl-Badanady
ರಾತ್ರಿ ಧೂಮ್ರ ಧೂಮಾವತಿ, ಕೊಡಮಣಿತ್ತಾಯಿ, ಮೈಸಂದಾಯ, ಪಂಜುರ್ಲಿ ದೈವಗಳಿಗೆ ನೇಮೋತ್ಸವ ಮತ್ತು ರಾಹು-ಗುಳಿಗ ದೈವಗಳ ಕೋಲ ನಡೆಯಿತು. ಇದೇ ವೇಳೆ ಮಂಗಳೂರು ಕಳವಾರು ಬಾಳ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ‘ನಾಗದೇವತೆ’ ಯಕ್ಷಗಾನ ಪ್ರದರ್ಶನಗೊಂಡಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ರಮೇಶ ಪ್ರಭು ಕೇದಾಯಿಕೋಡಿ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ವಾಮದಪದವು, ಕಾರ್ಯದಶರ್ಿ ಶೇಖರ ಸಪಲ್ಯ ಕುಂಞಮಾರು, ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ದಾರಂಪಾಲು, ಉಪಾಧ್ಯಕ್ಷ ಯಶೋಧರ ಸಪಲ್ಯ ಅಂತರಗುತ್ತು, ಕೋಶಾಧಿಕಾರಿ ರುಕ್ಮಯ ಸಪಲ್ಯ ಬದನಡಿ, ಸಮಿತಿ ಪ್ರಮುಖರಾದ ಸುಭಾಷ್ ಕೋರ್ಲೋಡಿ, ರೂಪೇಶ್ ಅಂದ್ರಳಿಕೆ, ಪ್ರಭಾಕರ ಪೂಜಾರಿ ಅಂತರಗುತ್ತು, ರವೀಂದ್ರ ಸಪಲ್ಯ ಬದನಡಿ, ಹರೀಶ ಕೋಟ್ಯಾನ್ ಅಂದ್ರಳಿಕೆ, ಸತೀಶ ಬಂಗೇರ ಬದನಡಿ, ಸತೀಶ ಎಂ., ಪ್ರೀತಂ ಅಂದ್ರಳಿಕೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *