ಬಂಟ್ವಾಳ: ಭಕ್ತಿಯಿಂದ ಭಗವಂತನ ಆರಾದನೆ ಮಾಡಿದಾಗ ಆತ್ಮಶುದ್ಧಿ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಮಾತ್ರವಲ್ಲದೆ ಅಜ್ಞಾನ ತೊರೆದು ಪರಮಾತ್ಮನ ದರ್ಶನವಾಗುವುದರ ಜೊತೆಗೆ ಧಾರ್ಮಿ ಕತೆಯಿಂದ ಸಮಾಜದಲ್ಲಿ ಸತ್ಕರ್ಮ ವೃದ್ಧಿಯಾಗಿ ಒಟ್ಟು ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಆಗಮ ತಜ್ಞ ಪಂಜ ಭಾಸ್ಕರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿ, ‘ಬ್ರಹ್ಮಕಲಶ ಪುಣ್ಯೋತ್ಸವ’ ಬಗ್ಗೆ ಉಪನ್ಯಾಸ ನೀಡಿದರು. 12 ವರ್ಷಗಳಂತೆ ಅಷ್ಟಬಂಧ ಬ್ರಹ್ಮಕಲಶ ಮೂಲಕ ದೇವರ ವಿಗ್ರಹಕ್ಕೆ ಪುನಶ್ಚೇತನ ನೀಡುವುದರ ಜೊತೆಗೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಯೆ, ಬೆಳ್ತಂಗಡಿ ಎ.ಪಿ.ಎಂ.ಸಿ.ಅಧ್ಯಕ್ಷ ಧರಣೇಂದ್ರ ಕುಮಾರ್, ಆರಂಬೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಎಸ್.ಶೆಟ್ಟಿ, ಉದ್ಯಮಿ ಚಿನ್ನಶೇಖರ ಭಂಡಾರಿ, ಮುಂಬೈ ವರ್ಲಿ ಅಪ್ಪಾಜಿಬೀಡು ಫೌಂಡೇಶನ್ ಸಂಸ್ಥಾಪಕ ರಮೇಶ್ ಶೆಟ್ಟಿ ಶುಭ ಹಾರೈಸಿದರು.
ದೇವಳದ ಆಸ್ರಣ್ಣ ಪಿ.ಕೃಷ್ಣಪ್ರಸಾದ ಆಚಾರ್ಯ, ರಾಜಗೋಪಾಲ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ಅನಂತ ಆಚಾರ್ಯ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್ ನಾಕ್ ಉಳಿಪಾಡಿಗುತ್ತು, ಅಧ್ಯಕ್ಷ ರಾಮಕೃಷ್ಣ ಚೌಟ, ಆಡಳಿತಾಧಿಕಾರಿ ಬಿ.ಸುಭಾಶ್ಚಂದ್ರ, ಪದಾಧಿಕಾರಿಗಳಾದ ರತ್ನಾಕರ ಎಸ್.ಶೆಟ್ಟಿ, ರಮೇಶ್ ಮಂಜಿಲ, ಉಮೇಶ್ ಎಸ್.ಶೆಟ್ಟಿ, ರಾಘವೇಂದ್ರ ಭಟ್, ಸುರೇಶ್ ಶೆಟ್ಟಿ ಪೂವಳ ಮತ್ತಿತರರು ಇದ್ದರು.
ಇದೇ ವೇಳೆ ದೇವಸ್ಥಾನ ಪುನರ್ ನಿರ್ಮಾಣದಲ್ಲಿ ಸಹಕರಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ, ರಂಗ ಕಲಾವಿದ ಎಚ್ಕೆ ನಯನಾಡು ವಂದಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
