ಮಂಗಳೂರು: ಚೌಕಭಾರ ಕನ್ನಡ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವು ಸೈಂಟ್ರೇಮಂಡ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶುಕ್ರವಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದ ನಿದೇಶಕ ರಘು ಶಿವಮೊಗ್ಗ ಪತ್ರಿಕೋದ್ಯಮ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು.
ಸುಮಾರು 20 ನಿಮಿಷದ ಕಿರುಚಿತ್ರವು ಆರ್ಥಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡದಿಂದ ಮನುಷ್ಯ ಹೇಗೆ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ, ತನ್ನದ್ದಲ್ಲದ ತಪ್ಪಿಗೆ ಯಾವ ರೀತಿ ಬಲಿಯಾಗುತ್ತಾನೆ ಎಂಬುದು ಚೌಕಭಾರ ಕಿರುಚಿತ್ರದ ಕಥಾಸಾರಂಶವನ್ನು ನಿದೇರ್ಶಕರು ಉತ್ತಮ ರೀತಿಯಲ್ಲಿ ಸೆರೆಹಿಡಿದ್ದಾರೆ.
ಸಂಸ್ಥೆಯ ಪ್ರಿನ್ಸಿಪಾಲ್ ಡಾ.ಸೆಲಿನ್ವಾಸ್ ಬಿಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪತ್ರಿಕೋದ್ಯಮ ಉಪನ್ಯಾಸಕ ಡೊಂಬಯ್ಯ ಇಡ್ಕಿದು ಉಪಸ್ಥಿತರಿದ್ದರು. ಸುಪ್ರೀತಾ ಕಾರ್ಯಕ್ರಮ  ನಿರ್ವಹಿಸಿದರು. ಇಂಪಾನ ವಂದಿಸಿದರು.

By suddi9

Leave a Reply

Your email address will not be published. Required fields are marked *