ಮಂಗಳೂರು: ನಗರದ ಹೊರವಲಯದ ನೀರು ಮಾರ್ಗ ಎಂಬಲ್ಲಿನ ಕಟ್ಟಡದ ಸಮೀಪದ ಪೊದೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಜನವರಿ 28ರಂದು ಸಂಭವಿಸಿದ್ದು, ಕೊಲೆಯ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗಿದೆ.
ಮೃತ ವ್ಯಕ್ತಿ ತೀರಾ ಅಪರಿಚಿತನಾಗಿದ್ದು, ಈತನ ಬಗ್ಗೆ ಸ್ಥಳೀಯರು ಯಾವುದೇ ಪೂರ್ವಾಪರ ತಿಳಿದಿಲ್ಲ. ಕೆಲವರ ಪ್ರಕಾರ ಈತ ಕಟ್ಟಡದಿಂದ ಕೆಳಗೆಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದು, ಇನ್ನು ಕೆಲವರ ಪ್ರಕಾರ ಈತನನ್ನು ಕೊಲೆ ನಡೆಸಿ ಇಲ್ಲಿಗೆ ತಂದು ಎಸೆಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಇಲ್ಲಿನವರ ಪ್ರಕಾರ ಇಲ್ಲಿನ ಪ್ಲಾಟ್ ಒಂದರಲ್ಲಿ ವಾಸವಾಗಿರುವ ಮಹಿಳೆಯೋರ್ವರು ಕಟ್ಟಡದ ಸಮೀಪ ಈ ಅಪರಿಚಿತ ವ್ಯಕ್ತಿಯನ್ನು ಗಮನಿಸಿದ್ದು, ಆಕೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್‍ಗೆ ಮಾಹಿತಿ ನೀಡಿದ್ದಳು. ಆತ ಈತನನ್ನು ಆತ ಅಟ್ಟಿಸಿಕೊಂಡು ಹೋಗುವಾಗ ಕಟ್ಟಡದ ಆರನೇ ಮಾಳಿಗೆಯಿಂದ ಜಂಪ್ ಮಾಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೆಲವರು ಆತನ ಮೃತದೇಹವನ್ನು ಕಂಡು ಪೊದೆಗೆ ಎಸೆದು ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತೊದ್ದು, ಈತ ಯಾವ ರೀತಿ ಮೃತಪಟ್ಟಿದ್ದಾನೆಂದು ಅಂದಾಜಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ. ಸಮೀಪದಲ್ಲಿ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವನ್ನು ಪರಿಶೀಲಿಸಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
