ಮಂಗಳೂರು: ಫರ್‍ನ್ಸ್ ಮೂವಿ ಇಂಟರ್ ನ್ಯಾಶನಲ್ ಅರ್ಪಿಸುವ `ಜೈತುಳುನಾಡು’ ತುಳು ಚಲನ ಚಿತ್ರ ಜನವರಿ 15 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ 11 ಟಾಕೀಸ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿ.ರೋಡ್‍ನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ರಾಧಿಕಾ, ಸುರತ್ಕಲ್‍ನಲ್ಲಿ ನಟರಾಜ ಹಾಗೂ ಮಣಿಪಾಲದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ಜೈತುಳುನಾಡು ತೆರೆಕಾರಣಲಿದೆ.
ಪ್ರವೀಣ್ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿವೆ. ಸಿನಿಮಾದಲ್ಲಿ ಅವಿನಾಶ್ ಶೆಟ್ಟಿ ನಾಯಕ ನಟನಾಗಿಯೂ ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆÉ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಮನಮೋಹನ್ ರೈ, ಸಂತೋಷ್ ಶೆಟ್ಟಿ, ಫ್ರಾಂಕ್ ಫೆರ್ನಾಂಡಿಸ್, ಪ್ರವೀಣ್, ಭವ್ಯ, ಸರೋಜಿನಿ ಶೆಟ್ಟಿ, ನಯನ, ಶ್ರೇಯಾ ಅಂಚನ್ ಅಭಿನಯಿಸಿದ್ದಾರೆ.

8330d8e7-e35f-4ac7-acf4-7a06547bd7a6

a77694bf-6f6a-4f4e-ac59-4c4d40f8786d

DSC_1024

 

DSC_1357

DSC_1518

f54fca36-bd25-403b-9a63-7648aed065fe
ದೇವಿ ಪುತ್ತೂರು ಕಥೆ, ಎಸ್.ಎಸ್.ಡೇವಿಡ್ ಮತ್ತು ಪ್ರವೀಣ್ ಸಂಭಾಷಣೆ ಗೌರಿವೆಂಕಟೇಶ್ ಛಾಯಾಗ್ರಹಣ, ಶಿವರಾಜು ಮೇಹು ಸಂಕಲನ, ಕೌರವ ವೆಂಕಟೇಶ್ ಸಾಹಸ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತದಲ್ಲಿ ಸಹಕರಿಸಿದ್ದಾರೆ. ಎನ್.ಜಿ.ಶಿವಣ್ಣ ರಾಜ ಸುಲೋಚನ ನಂದಿಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ.
ಪೆÇಲೀಸ್ ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದ ವ್ಯಕ್ತಿಯೊಬ್ಬ ತನಗೆ ಅದು ಸಾಧ್ಯವಾಗದೇ ಇದ್ದಾಗ ತನ್ನ ಮಗನಲ್ಲಿ ಆ ಕನಸು ತುಂಬಿ ಮಗನನ್ನು ದಕ್ಷ ಪೆÇಲೀಸ್ ಅಧಿಕಾರಿಯನ್ನಾಗಿ ಮಾಡುವುದರ ಸುತ್ತ ಚಿತ್ರದ ಕತೆ ಸಾಗುತ್ತದೆ. ಸಿನಿಮಾದಲ್ಲಿ ಹಾಡು, ಫೈಟ್, ಹಾಸ್ಯ ಹಾಗೂ ಸಮಾಜಕ್ಕೂ ಒಳ್ಳೆಯ ಸಂದೇಶವೂ ಇದೆ ಎಂದು ನಿರ್ದೇಶಕ ಪ್ರವೀಣ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *