ಕಾವೂರು – ಕೂಳೂರು ಪರಿಸರದಲ್ಲಿ ಗಾಂಜಾ ಹಾವಳಿಯು ವಿಪರೀತವಾಗಿದ್ದು ಎಳೆಯ ವಯಸ್ಸಿನ ಬಾಲಕರು ಕೂಡ ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಈ ಪರಿಸರ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕೃತ್ಯಗಳು, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಗಾಂಜಾ ವ್ಯಸನಿಗಳು ಕಾರಣರಾಗುತ್ತಿದ್ದಾರೆ. ಪೊಲೀಸ್ ಇಲಾಖೆಯು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು. ಗಾಂಜಾ ಹಾವಳಿಯು ಇನ್ನಷ್ಟು ಹೆಚ್ಚಲು ಪ್ರೋತ್ಸಾಹ ನೀಡಿದಂತಾಗಿದೆ. ಹಾಗಾಗಿ ಗಾಂಜಾ ಹಾವಳಿಯನ್ನು ತಡೆಯಲು ತಾವು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ,
ನಿಯೋಗದಲ್ಲಿ ಪಂಜಿಮೊಗರಿನ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್ಐ ಪಂಜಿಮೊಗರು ಅಧ್ಯಕ್ಷ ಅನಿಲ್ ಡಿ’ಸೋಜ, ಕಾರ್ಯದರ್ಶಿ ಚರಣ್ ಶೆಟ್ಟಿ, ನೌಷಾದ್ ಬಾವ, ಕಲೀಲ್, ನಿಯಾಜ್, ಸಂತೋಷ್ ಡಿ’ಸೋಜ ಉಪಸ್ಥಿತರಿದ್ದರು.

