ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 43ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮೇ 2ರಂದು ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮದುವೆಯಲ್ಲಿ ದುಂದು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 43 ವರ್ಷದ ಹಿಂದೆ ಆರಂಭಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ಅತ್ಯಂತ ಜನಪ್ರಿಯವಾಗಿದೆ.ಕ್ಷೇತ್ರದ ವತಿಯಿಂದ ವಧುವರರಿಗೆ ಸೀರೆ, ರವಕೆ ಕಣ, ಧೋತಿ, ಶರ್ಟು, ಕರಿಮಣಿಯನ್ನು ನೀಡಲಾಗುತ್ತದೆ. ಈ ಬಾರಿ ಈಗಾಗಲೇ 187 ಜೋಡಿ ವಿವಾಹಕ್ಕೆ ನೋಂದಣಿಯಾಗಿದೆ. ಮೇ. 2ರಂದು ಗೋಧೋಳಿ ಲಗ್ನದಲ್ಲಿ ವಿವಾಹ ಸಮಾರಂಭ ನಡೆಯಲಿದೆ.
