ಮಂಗಳೂರು: ಹಲವು ಪ್ರಕರಣಗಳ ಆರೋಪಿದಲ್ಲಿ ಭಾಗಿಯಾಗಿದ್ದ  ಆರೋಪಿಯನ್ನು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ನಗರದ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ತಂಡವೊಂದು ಕೊಲೆಗೈದ ಘಟನೆ ನಡೆದಿದೆ.
ಕೊಲೆಯಾದವನ್ನು ಮೂಡುಶೆಡ್ಡೆ ನಿವಾಸಿ ವಿಜೇತ್(29) ಎಂದು ಹೆಸರಿಸಲಾಗಿದೆ.
IMG-20151029-WA0065ಈತನು ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕೊಲೆಯತ್ನ ಪ್ರಕರಣಗಳೂ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜೇತ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ನವೆಂಬರ್ 11, 2011ರಲ್ಲಿ ಮೂಡುಶೆಡ್ಡೆ ಸಮೀಪದ ಶಿವನಗರ ಎಂಬಲ್ಲಿ ನಡೆದಿದ್ದ ರೌಡಿಶೀಟರ್ ಮುರುಗೇಶ್ ಹಾಗೂ ಆತನ ಬಾವ ಉಪೇಂದ್ರ ಎಂಬವರ ಕೊಲೆ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಎರಡು ಕೊಲೆಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿತ್ತು. ಬುಧವಾರ ರಾತ್ರಿಯೇ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ತಂಡ ಗುರುವಾರ ನಸುಕಿನ ಜಾವ ಮೂಡುಶೆಡ್ಡೆ ಜಂಕ್ಷನ್‍ನಲ್ಲಿಯೇ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ ಎನ್ನಲಾಗಿದೆ
ತಲವಾರು, ಮಚ್ಚಿನೇಟಿನಿಂದ ಗಂಭೀರ ಗಾಯಗೊಳಗಾದ ವಿಜೇತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೆನ್‍ಲಾಕ್ ಶವಾಗಾರದಲ್ಲಿ ಇರಿಸಲಾಗಿದೆ. ಕೆಲವರ್ಷಗಳಿಂದ ಈತನೊಂದಿಗೆ ಇದ್ದ ಒಂದೇ ತಂಡದ ಸದಸ್ಯರ ಮಧ್ಯೆ ವೈಮನಸ್ಸು ಬೆಳೆದಿದ್ದು, ಇದೇ ಹಿನ್ನೆಲೆಯಲ್ಲಿ ಒಂದೆರಡು ಬಾರಿ ಗಲಾಟೆಯೂ ನಡೆದಿತ್ತೆನ್ನಲಾಗಿದೆ. ಪೊಲೀಸರು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.

By suddi9

Leave a Reply

Your email address will not be published. Required fields are marked *