ಒಡ ಹುಟ್ಟಿದ ತನ್ನ ತಂಗಿಯ ಮೇಲೆ ಕಳೆದ 8 ವರ್ಷಗಳಿಂದ ಎಸಗುತ್ತಿದ್ದ 33 ವರ್ಷದ ವೈದ್ಯನನ್ನು ಗುರ್ಗಾಂವ್ ಪೋಲಿಸರು ಬಂಧಿಸಿದ್ದಾರೆ.ಸಹೋದರಿ 12 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಗುರಗಾಂವ್‌ನಲ್ಲಿ ಆಸ್ಪತ್ರೆಯಲ್ಲಿ ಾಗಿದ್ದ  ರಾಕೇಶ್ ಕುಮಾರ್ ಎಂಬ ಪಾಪಿ ಅಣ್ಣ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
rape
ಕಳೆದ ರವಿವಾರ ಆರೋಪಿ ವೈದ್ಯನನ್ನು ಮಾಜಿಸ್ಟ್ರೇಟ್ ಮುಂದೆ ಪ್ರಸ್ತುತ ಪಡಿಸಲಾಯಿತು.ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
27 ರ ಹರೆಯದ ಆತನ ತಂಗಿ ಈಗ ನವದೆಹಲಿಯ ಕೇಂದ್ರ ಸರಕಾರದ ಕಛೇರಿಯಲ್ಲಿ ಮಾಹಿತಿ ಅಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರ ಮನೇಸರ್ ಪೊಲೀಸ್ ಠಾಣೆಯಲ್ಲಿ ತನ್ನ ದುರುಳ ಅಣ್ಣನ ವಿರುದ್ಧ ದೂರು ದಾಖಲಿಸಿದ ಆಕೆ ಇಷ್ಟು ವರ್ಷ ಅಸಹನೀಯವಾದ ಕಷ್ಟವನ್ನು ಅನುಭವಿಸುತ್ತಿದ್ದರೂ ತನ್ನ ಕುಟುಂಬ, ಸಾಮಾಜಿಕ ಕಳಂಕ ಎದುರಿಸ ಬೇಕಾಗುತ್ತದೆ ಎಂಬ ಭಯಕ್ಕೆ ಹೆದರಿ ಮೌನವಾಗಿದ್ದೆ ಎಂದು ಹೇಳಿದ್ದಾರೆ.
ಗುರ್ಗಾವ್‌ನಿಂದ 20 ಕೀ ಮೀ ದೂರವಿರುವ ರಾಷ್ಟ್ರೀಯ ಭದ್ರತಾ ಗಾರ್ಡ್ ಬೇಸ್ ಕ್ಯಾಂಪ್ ಹತ್ತಿರದ  ನೈನವಾಲ್ ಎಂಬ ಹಳ್ಳಿಯ ಮನೇಸರ್ ಪ್ರದೇಶದಲ್ಲಿ ಅವಳ ಕುಟುಂಬ ವಾಸಿಸುತ್ತಿದೆ. ಆಕೆಗೆ ಈತನೊಬ್ಬನೇ ಸಹೋದರನಾಗಿದ್ದು, ಮೂವರುಯದ್ದಾರೆ ಮತ್ತು ಎಲ್ಲರೂ ವಿವಾಹಿತರಾಗಿದ್ದಾರೆ. ಆರೋಪಿಯ ವಿರುದ್ಧ ಅತ್ಯಾಚಾರ, ದಾಳಿ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ದಾಖಲಿಸಿದ್ದಾಳೆ.
ತನ್ನ ಮೇಲೆ ಪ್ರಥಮ ಬಾರಿ(2005) ಅತ್ಯಾಚಾರವಾದಾಗಿನಿಂದ ತಾನು ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದೆ. ಆದರೆ ತಾಯಿಯನ್ನು ನೋಡಲು ಮನೆಗೆ ಬಂದಾಗಲೆಲ್ಲ ಆತ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಅತ್ಯಾಚಾರಕ್ಕೊಳಗಾದ ಮಹಿಳೆ ವೈದ್ಯಕೀಯ ಪರೀಕ್ಷೆಗೊಳಗಾಗಲು ನಿರಾಕರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *