ಮುಂಬೈ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂಬ ಆಮಿಷ ತೋರಿ 23 ವರ್ಷದ ಮಾಡೆಲ್ ಮೇಲೆ ತನ್ನ ಮನೆಯಲ್ಲಿ ಎರಡು ಬಾರಿ ಅತ್ಯಾಚಾರ ಮಾಡಿದ ಮತ್ತು ಆಕೆಯನ್ನು ಪೀಡಿಸಿದ ಆರೋಪದ ಮೇಲೆ ಬಾಲಿವುಡ್ ನಟ ಇಂದರ್ ಕುಮಾರ್ ಸರಾಫ್‌ರವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

inderkumar-630
ವೃತ್ತಿಯಲ್ಲಿ ಮಾಡೆಲ್ ಆಗಿರುವ ಯುವತಿಗೆ ಸಿನಿಮಾದಲ್ಲಿ ಮುಖ್ಯ ಭೂಮಿಕೆ ಕೊಡಿಸುವುದಾಗಿ ಪೊಳ್ಳು ಭರವಸೆ ನೀಡಿದ್ದ ಇಂದರ್ ಕುಮಾರ್ ಕಳೆದ 3 ದಿನಗಳಲ್ಲಿ  2 ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದ್ದು ನಾಳೆ ಕೋರ್ಟ್‌ನಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ. ‘ತನ್ನ ಮೇಲೆ ಬಿಯರ್ ಬಾಟಲಿಯಿಂದ ದಾಳಿ ಮಾಡಲಾಯಿತು. ಅಲ್ಲದೇ ಕಳೆದ ರಾತ್ರಿ ಅಂಧೇರಿ ಉಪನಗರದಲ್ಲಿರುವ ಆತನ ಮನೆಯಲ್ಲಿ ನನ್ನನ್ನು ಬಂಧಿಸಿಡಲಾಯಿತು’ ಎಂದು ಪೀಡಿತ ಯುವತಿ ಆರೋಪಿಸಿದ್ದಾಳೆ. ಆಕೆಯ ಮೈಮೇಲೆ ಸುಟ್ಟ ಗಾಯಗಳ ಗುರುತುಗಳಿದ್ದು, ಆತ ಸಿಗರೆಟ್‌ನಿಂದ ಸುಟ್ಟಿದ್ದಾನೆ ಎಂದು ತಿಳಿದು ಬರುತ್ತಿದೆ.
ಆತ ಮತ್ತು ಪತ್ನಿ ಪಲ್ಲವಿಯ ಸಂಬಂಧ ಹದಗೆಟ್ಟಿದ್ದು, ಅವರು ಅದೇ ಕಟ್ಟಡದಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಅವರಿಬ್ಬರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಎರಡು ದಿನಗಳ ಹಿಂದೆ ಅವರಿಬ್ಬರ ನಡುವೆ ನಡುರಾತ್ರಿಯವರೆಗೆ ಜಗಳವಾಗಿ ಕೋಪಗೊಂಡ ಪಲ್ಲವಿ ತನ್ನ ಪತಿಯ ವಿರುದ್ಧ ವಿವಾಹೋತ್ತರ ಸಂಬಂಧ ಹೊಂದಿದ್ದಾರೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಆತನನ್ನು ಠಾಣೆಗೆ ಕರೆಸಿದ ಪೋಲಿಸರು ಸಂಧಾನ ಮಾಡಿಸಿ ಮನೆಗೆ ಕಳುಹಿಸಿದ್ದರು. ಆ ದಿನ  ಮಾಡೆಲ್‌ಳನ್ನು ಆತ ತನ್ನ ಮನೆಗೆ ಕರೆಸಿದ. ಮಾತು ವಿವಾದಕ್ಕೆ ತಿರುಗಿದಾಗ ಬಿಯರ್ ಬಾಟಲಿಯಿಂದ ಆಕೆಯ ಮೇಲೆ ದಾಳಿ ಮಾಡಿದ ಆತ ಆಕೆಯನ್ನು ರಾತ್ರಿ ಅಲ್ಲಿಯೇ ಬಂಧಿಸಿಟ್ಟ ಮತ್ತು ಬಲಾತ್ಕಾರ ಎಸಗಿದ ಎಂದು ಪೋಲಿಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *