ಕನ್ನಡದ ಭವಿಷ್ಯವು ಇಂದಿನ ನಾಗರಿಕರ ಮೇಲೆ ಹೊಂದಿಕೊಂಡಿದೆ.: ವಿ.ಗ.ನಾಯಕ
ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯದಂತಹ ಪತ್ರಿಕೆಯ ಲೇಖಕರ ಮತ್ತು ಓದುಗರ ಸಮಾವೇಶವು ಮುಂಬಯಿಯಲ್ಲಿ ನಡೆಯುತ್ತಿರುವುದು ಒಂದು ವಿಶೇಷ. ಜಾತಿ ಮರೆತು ಮೊಗವೀರ ಪತ್ರಿಕೆಯು ಸುಮಾರು 75 ವರುಷ ಪೂರೈಸಿದ್ದು ಅಲ್ಲದೆ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಮಹಾ ಮಾನವೀಯತೆಯನ್ನು ಮೆರೆದಿದೆ. ಕನ್ನಡದ ಭವಿಷ್ಯವು ಇಂದಿನ ನಾಗರಿಕರ ಮೇಲೆ ಹೊಂದಿಕೊಂಡಿರುವುದರಿಂದ ನಮ್ಮ ಮಕ್ಕಳಿಗೆ ಕನ್ನಡ ಓದಲು ಬರೆಯಲು ಪ್ರೇರಿಸಬೇಕು. ಆಗ ಮಾತ್ರ ಮುಂದೆ ಕನ್ನಡ ಪತ್ರಿಕೆಗಳು ಉಳಿಯಲು ಸಾಧ್ಯ. ಮೊಗವೀರ ಸಮಾಜವು ಮಹಿಳೆಯರಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ್ದು, ಆ ಸಮಾಜದಲ್ಲಿನ ಮಾನವೀಯತೆ ಮತ್ತು ಔದರ್ಯತೆಯನ್ನು ಇತರರು ಅನುಸರಿಸಬೇಕು ಎಂದು ನಾಡಿನ ಹೆಸರಾಂತ ಸಾಹಿತಿ ಮತ್ತು ಸಂಶೋಧಕ ವಿ.ಗ ನಾಯಕ ತಿಳಿಸಿದರು. ಇಂದಿಲ್ಲಿ ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಸಭಾಗೃಹದಲ್ಲಿಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮುಖವಾಣಿ `ಮೊಗವೀರ’ ಮಾಸಿಕವು ತನ್ನ ಅಮೃತಮಹೋತ್ಸವ ನಿಮಿತ್ತಆಯೋಜಿಸಿದ್ದ`ಲೇಖಕರ ಮತ್ತು ಓದುಗರ ಸಮಾವೇಶ’ದ ಅಧ್ಯಕ್ಷತೆ ವಹಿಸಿ ವಿ.ಗನಾಯಕ ಮಾತನಾಡಿದರು. ಮೊಗವೀರ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸದಾನಂದ ಎ.ಕೋಟ್ಯಾನ್ ಅವರು ಮೊಗವೀರ ಸಂಚಿಕೆಯನ್ನು ಅನಾವರಣಗೊಳಿಸಿ ಸಮಾವೇಶ ಉದ್ಘಾಟಿಸಿದರು.

Kannada Dept. Mogaveera-1

Kannada Dept. Mogaveera-3

Kannada Dept. Mogaveera-5

Kannada Dept. Mogaveera-6

Kannada Dept. Mogaveera-7

Kannada Dept. Mogaveera-8

Kannada Dept. Mogaveera-A1

Kannada Dept. Mogaveera-A2

Kannada Dept. Mogaveera-B3

Kannada Dept. Mogaveera-B5ಪ್ರಧಾನ ಅಭ್ಯಾಗತರುಗಳಾಗಿ ಹೆಸರಾಂತ ಕವಿ ಹೆಚ್.ದುಂಡಿರಾಜ್ ಮತ್ತು ಕನ್ನಡಿಗ ಪತ್ರಕರ್ತರ ಸಂಘಮಹಾರಾಷ್ಟ್ರ ಇದರಅಧ್ಯಕ್ಷಚಂದ್ರಶೇಖರ ಪಾಲೆತ್ತಾಡಿ, ಪತ್ರಕರ್ತೆ ಮತ್ತು ಸಂಶೋಧಕಿ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ ಉಪಸ್ಥಿತರಿದ್ದರು.
ಸದಾನಂದ ಕೋಟ್ಯಾನ್ ಉದ್ಘಾಟನಾ ಭಾಷಣಗೈದು ಪತ್ರಿಕೋಧ್ಯಮವು ಮನುಷ್ಯನ ಸಂಸ್ಕೃತಿಯನ್ನು ರೂಪಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಇಂದು ಪತ್ರಿಕೋಧ್ಯಮಕ್ಕೆಅದರದ್ದೆ ಆದ ಒಂದು ಸಂಸ್ಕೃತಿಯಿದೆ. ಹಿಂದೆ ಒಂದು ರೀತಿಯ ಮೌಲ್ಯಭರಿತ ಪತ್ರಿಕೋಧ್ಯಮ ಇತ್ತು ಇಂದು ಅದು ಉದ್ಯಮವಾಗುವುದರಿಂದ ಮಾರುಕಟ್ಟೆ ನಿಯಂತ್ರಿತವಾಗಿದೆ. ಹಾಗಾಗಿ ಓದುಗರ ಅಭಿರುಚಿಯು ಮಾರುಕಟ್ಟೆ ನಿಯಂತ್ರಣದಲ್ಲಿ ಒಳಪಟ್ಟಿದೆ. ಲೋಕದ ಜೀವನವನ್ನು ಅವುಗಳನ್ನು ಬೆಳಕಿನಲ್ಲಿ ನೋಡಿ ನಿಷ್ಕಕಲ್ಮಶ ಮನಸ್ಸಿನಿಂದ ವಿಚಾರಿಸಿ ತನ್ನ ಬುದ್ಧಿಗೆ ಏನು ತೋಚಿಸುತ್ತದೆ ಎನ್ನುವುದು ಓದುಗರಿಗೆ ವಿಜ್ಞಾಪಿಸುವುದು ಪತ್ರಿಕೆಯ ಸಂಪಾದಕನ ಕರ್ತವ್ಯವಾಗಿದೆ ಎಂದರು. ಮುಂಬಯಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಔಚಿತಪೂರ್ಣವಾಗಿದೆ. ಮೊಗವೀರ ಪತ್ರಿಕೆಯು ತಮ್ಮ ಅಮೃತ ಮಹೋತ್ಸವದ ಆಚರಿಸುವ ಈ ಸುಸಂದರ್ಭದಲ್ಲಿ ಶುಭಹಾರೈಸುತ್ತೇನೆ ಎಂದು ದುಂಡಿರಾಜ್ ತಿಳಿಸಿದರು. ಏಳುವರೆ ದಶಕಗಳಿಂದ ಅಭಿಮಾನ ಪಡುವಂತಹ ಪತ್ರಿಕೆಯಾಗಿ ಮೊಗವೀರ ಬೆಳೆದಿದೆ. ಈ ಅಮೃತ ಮಹೋತ್ಸವ ನಿಮಿತ್ತ ಅಕ್ಷರ ಹುಟ್ಟು ಹಾಕುವ ಸ್ಥಳವಾದ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಚರ್ಚೆ ನಡೆಯುವುದು ಇದೊಂದು ಕ್ರಾತಿಕಾರ ಹೆಜ್ಜೆಯಾಗಿದೆ. ಬದುಕು ಕೊಳ್ಳಲು ಅನೇಕ ಸಲ ಸಂಸ್ಕೃತಿಯ ವಿಕೃತಿಯಾಗುತ್ತಿದೆ. ಈ ಬಗ್ಗೆ ನಾಡಿನ ಪತ್ರಿಕೆಗಳು ಬೆಳಕು ಚೆಲ್ಲಬೇಕು ಎಂದು ಪಾಲೆತ್ತಾಡಿ ನುಡಿದರು. ಡಾ| ಸೀತಾಲಕ್ಷ್ಮೀ ಮಾತನಾಡಿ ಪತ್ರಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು, ಅನೇಕ ಸಾಮಾಜಿಕ ಸಂಗತಿಗಳ ವರದಿಯಾಗದೆ ಗೌಪ್ಯವಾಗಿದ್ದರೆ, ಕೆಲವೊಂದು ವರದಿಗಳು ವಿಜೃಂಭಿಸುತ್ತದೆ ಎಂದು ಪತ್ರಿಕೋಧ್ಯಮ ಮತ್ತು ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಮೊಗವೀರ ವ್ಯವಸ್ಥಾಪಕ ಮಂಡಳಿ
ಮುಂಬಯಿ ಅಧ್ಯಕ್ಷ ಅಜಿತ್ ಜಿ.ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ.ಸಾಲ್ಯಾನ್, ಜೊತೆ ಕೋಶಾಧಿಕಾರಿ ಪುರುಷೋತ್ತಮ ಕರ್ಕೇರ, ಲೈಬ್ರೆರಿ ಸಮಿತಿ ಕಾರ್ಯಾಧ್ಯಕ್ಷ ಜಿ.ಕೆ ರಮೇಶ್, ಮೊಗವೀರ ಪತ್ರಿಕೆಯ ಮೆನೇಜರ್ ಲಕ್ಷ್ಮಣ್ ಸಿ.ಎನ್. ಹರೀಶ್ ಪುತ್ರನ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸುವರ್ಣ ಉಪಸ್ಥಿತರಿದ್ದರು. ವಿದುಷಿ ವೀಣಾ ಶಾಸ್ತ್ರಿ ಗೀತಾ ಗಾಯನವನ್ನಾಡಿದರು. ಹೆಚ್. ಅರುಣ್ ಕುಮಾರ್ ಸ್ವಾಗತ ಕೋರಿದರು. ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್.ಸುವರ್ಣ ಪ್ರಾಸ್ತಾವಿಕ ಭಾಷಣವನ್ನಿತ್ತರು. ಡಾ| ಜಿ.ಎನ್ ಉಪಾಧ್ಯ ಆಶಯ ಭಾಷಣಗೈದರು. ಜಿ.ಕೆ ರಮೇಶ್, ದಯಾವತಿ ಸುವರ್ಣ, ಜಿ.ಕೆ ಕರ್ಕೇರಾ, ಪುರುಷೋತ್ತಮ್ ಶ್ರೀಯಾನ್ ಅವರು ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಮೊಗವೀರದ ಮಾಜಿ ಸಂಪಾದಕಿ ಜಿ.ಪಿ ಕುಸುಮಾ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *