ಬೆಂಗಳೂರು:

ಹೊತ್ತಿಕೊಂಡ ಘಟನೆ ಸಂಭವಿಸಿದೆ. ಶಾರ್ಟ್’ಸರ್ಕ್ಯೂಟ್’ನಿಂದ ಬೆಂಕಿ ತಗುಲಿತೆಂದು ಹೇಳಲಾಗುತ್ತಿದೆ.
ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಾಕಷ್ಟು ಪರಿಶ್ರಮಪಟ್ಟು ಬೆಂಕಿಯನ್ನ ನಂದಿಸುವ ಕಾರ್ಯ ಮಾಡಿದೆ.
ಈ ಹೈಕಲ್ ಕೆಮಿಕಲ್ ಕಂಪನಿಯಲ್ಲಿ ಆಡಿಟ್ ಮಾಡಲು ಅಮೆರಿಕದಿಂದ ನಿಯೋಗವೊಂದು ನಿನ್ನೆ ಇಲ್ಲಿಗೆ ಬಂದಿತ್ತು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಕಂಪನಿಯಲ್ಲಿ ಬೆಂಕಿ ಹರಡುವಂಥ ಸಾಧ್ಯತೆಗಳೂ ಯಾವುದೂ ಇರಲಿಲ್ಲ. ಬೆಂಕಿ ಹೊತ್ತಿಕೊಳ್ಳುವಂಥ ರಾಸಾಯನಿಕಗಳು ಅಲ್ಲಿರಲಿಲ್ಲ. ಆದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಗ್ನಿಯ ಕೆನ್ನಾಲಿಗೆ ಚಾಚಿಕೊಂಡಿದ್ದು, ಹಲವು ಅನುಮಾನಗಳನ್ನ ಸೃಷ್ಟಿಸುತ್ತಿದೆ.

