ಮುಂಬಯಿ: ಕನ್ನಡ ಪ್ರೇಮಿ ಮಂಡಳಿ ಖಾಲ್ಸಾ ಕಾಲೇಜು ಮಾಟುಂಗಾ ಮುಬಯಿ ಇದರ ಹಳೆ ವಿದ್ಯಾರ್ಥಿ ಇದರ ವಾರ್ಷಿಕ ಸಹಮಿಲನವನ್ನು ಇದೇ ಅಕ್ಟೋಬರ್.11ನೇ ಆದಿತ್ಯವಾರ ಪೂರ್ವಾಹ್ನ 10.00 ಗಂಟೆಗೆ ಸಯಾನ್ ಪೂರ್ವದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಡಾ| ಸುನೀತಾ ಎಂ.ಶೆಟ್ಟಿ ಮಾರ್ಗದರ್ಶನದಲ್ಲಿ ಆಚರಿಸಲಿದೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಶಂಕರ್ ಶೆಟ್ಟಿ, ಸಾತ್ವಿಕಾ ಶೆಟ್ಟಿ, ವಿ.ಜಿ ರೈ, ಸಂತೋಷ್ ಶೆಟ್ಟಿ ಮತ್ತಿತರ ಹಳೆ ವಿದ್ಯಾರ್ಥಿಗಳ ಮುಂದಾಳುತ್ವದಲ್ಲಿ ನಡೆಯಲಿರುವ ಸಹಮಿಲನದಲ್ಲಿ ಮಂಡಳಿಯ ಸರ್ವ ಹಳೆ ವಿದ್ಯಾರ್ಥಿಗಳು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಮಿಲನದ ಯಶಸ್ಸಿಗೆ ಮತ್ತು ಸಂಘಟನೆಗೆ ಸಹಕರಿಸುವಂತೆ ಮಂಡಳಿಯ ಪದಾಧಿಕಾರಿ ಎನ್ ಎಂ ರಮೇಶ್ (9821013048) ಈ ಮೂಲಕ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *