ಸುದ್ದಿ9 ಮಂಗಳೂರು: ಜಾನುವಾರು ಸಾಗಾಟಗಾರ ಜೋಕಟ್ಟೆಯ ಕಬೀರ್ ಎಎನ್ಎಫ್ ಸಿಬ್ಬಂದಿ ಶನಿವಾರ ಮುಂಜಾನೆ ಶೂಟೌಟ್ ಮಾಡಿದ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಖಂಡಿಸಿ ರವಿವಾರ ಸಂಜೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಬೃಹತ್ ಪ್ರತಿಭಟನೆ ನಡೆಸಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಎಫ್ಐ ರಾಜ್ಯ ಉಪಾಧ್ಯಕ್ಷ ಅಬ್ದುರ್ರಝಾಕ್ ಕೆಮ್ಮಾರ, `ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಸ್ತಿತ್ವಕ್ಕೆ ಬಂದ ಬಳಿಕ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ. ಅಮಾಯಕರ ಕಗ್ಗೊಲೆಯಾಗುತ್ತಿದೆ. ಹಾಗಾಗಿ ಸರಕಾರ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.ಕಬೀರ್ ತಪ್ಪು ಮಾಡಿದ್ದರೆ ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿ ಶಿಕ್ಷೆ ಕೊಡಿಸಬಹುದಿತ್ತು. ಆದರೆ ಪಡೆ ಆತನಿಗೆ ಗುಂಡಿಕ್ಕುವ ಮೂಲಕ ತಪ್ಪು ಮಾಡಿದೆ ಅವರಿಗೆಗುಂಡಿಕ್ಕುವ ಅಧಿಕಾರ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.ಜಿಲ್ಲೆಯ ಮೂವರು ಸಚಿವರು ಮೃತ ಕಬೀರ್ನ ಕುಟುಂಬ ಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳ ದಿದ್ದುದು ವಿಪಯರ್ಾಸ. ಅಲ್ಪಸಂಖ್ಯಾ ತರ ರಕ್ಷಕರು ಎಂದು ಹೇಳಿಕೊಳ್ಳುವ ಇವರಿಂದ ಇನ್ನೆಂತಹ ರಕ್ಷಣೆ ಸಿಗ ಬಹುದು ಎಂದು ಪಿಎಫ್ಐ ಮುಖಂಡ ಶಾಫಿ ಬೆಳ್ಳಾರೆ ಪ್ರಶ್ನಿಸಿದರಲ್ಲದೆ, ಗುಜರಾತ್ನ ಮೋದಿ ಸರಕಾರಕ್ಕೂ ಸಿದ್ದರಾಮಯ್ಯರ ಕನರ್ಾಟಕದ ಕಾಂಗ್ರೆಸ್ ಸರಕಾರಕ್ಕೂ ಏನೂ ವ್ಯತ್ಯಾಸ ವಿಲ್ಲ ಎಂದರು.ಕಾಪರ್ೊರೇಟರ್ ಅಝೀಝ್ ಕುದ್ರೋಳಿ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಎಸ್ಡಿಪಿಐ ಮುಖಂಡರಾದ ಅನ್ವರ್ ಸಾದಾತ್, ಅಬ್ದುರ್ರಹ್ಮಾನ್ ಮಲ್ಪೆ, ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.




