ಪುತ್ತೂರು: ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪುತ್ತೂರಿನ ಭಾವನಾ ಕಲಾ ಆಟ್ರ್ಸ್ ಮರಳು ಕಲಾಕೃತಿ ರಚನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದೆ. ಭಾನುವಾರ ಮಂಗಳೂರಿನ ತಣ್ಣೀರುಬಾವಿ ನದಿ ಕಿನಾರೆಯಲ್ಲಿ ಕಲಾಂ ಅವರ ಬೃಹತ್ ಮರಳುಶಿಲ್ಪವನ್ನು ಭಾವನಾ ಕಲಾ ಆಟ್ರ್ಸ್ನ ವಿಘ್ನೇಶ್ ವಿಶ್ವಕರ್ಮ ರವರ ನೇತೃತ್ವದಲ್ಲಿ ರಚಿಸಲಾಯಿತು. ಕಲಾಂಜೀಗೊಂದು ಕಲಾಸಲಾಂ ಎಂಬ ಅಡಿಬರಹವನ್ನೂ ಕಲಾಕೃತಿಯ ಕೆಳಗೆ ನೀಡಲಾಗಿದ್ದು ಎಲ್ಲರ ಗಮನಸೆಳೆಯಿತು.

ಕಡಲಕಿನಾರೆಗೆ ವೀಕ್ಷಣೆಗೆ ಬಂದ ಪ್ರವಾಸಿಗರೂ ಕಲಾಂ ಕಲಾಕೃತಿಗೆ ನಮಿಸಿ ಶ್ರದ್ದಾಂಜಲಿ ಅರ್ಪಿಸಿದರಲ್ಲದೆ, ಭಾವನಾ ಆಟ್ರ್ಸ್ನ ಕಲಾಪ್ರೇಮವನ್ನೂ- ಕಲಾಂ ಪ್ರೇಮವನ್ನೂ ಶ್ಲಾಘಿಸಿದರು. ಭಾವನಾ ಆಟ್ರ್ಸ್ನ ದಿನೇಶ್ ವಿಶ್ವಕರ್ಮ, ಸವ್ಯರಾಜ್, ಗಣೇಶ್ ಕೋರಿಯರ್, ಭಾಸ್ಕರ್ ಕೆಲಿಂಜ, ವಿಶಾಲ್, ಮಿಥುನ್ ರಾಜ್, ವಸಂತ, ಜಗದೀಶ್ ಮಾಮೇಶ್ವರ, ಅನುಸೂಯ, ವನಿತಾ ವಿಘ್ನೇಶ್, ಮಾ.ವಿನಿಲ್,ಯಶಸ್, ವಿಶಸ್, ಜ್ಞಾನೇಶ್ ವಿಶ್ವಕರ್ಮ ಮೊದಲಾದವರು ಮರಳು ಶಿಲ್ಪ ರಚನೆಯಲ್ಲಿ ತೊಡಗಿಸಿಕೊಂಡರು.


