ಮಂಗಳೂರು: ಕೇಂದ್ರ ಮೈದಾನದಲ್ಲಿ ಜರಗಿದ ಮೂರು ದಿನಗಳ ರಾಮೋತ್ಸವವು ಮಾ.29 ಭಾನುವಾರದಂದು ರಾವಣ ದಹನದೊಂದಿಗೆ ಸಂಪನ್ನಗೊಂಡಿತು.
2903mlr15

ವಿಶ್ವ ಹಿಂದೂ ಪರಿಷತ್‌, ಬಜರಂಗದಳ,ಮಾತೃಮಂಡಳಿ, ದುರ್ಗಾ ವಾಹಿನಿ ಮತ್ತು ಶ್ರೀರಾಮೋತ್ಸವ ಸಮಿತಿಯ ವತಿಯಿಂದ ಜರಗಿದ ಶ್ರೀ ರಾಮೋತ್ಸವದ ಅಂಗವಾಗಿ ಮೂರು ದಿನಗಳಲ್ಲಿ ವಿವಿಧ ರೀತಿಯ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಸಂಜೆ ಧಾರ್ಮಿಕ ಸಭೆ ನಡೆದ ಬಳಿಕ ರಾವಣ ದಹನ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು.
ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಪ್ರಮುಖರಾದ ವಿಜಯನಾಥ ವಿಠಲ ಶೆಟ್ಟಿ, ಹರಿಶ್ಚಂದ್ರ, ಕೇಶವ ಹೆಗ್ಡೆ, ನಳಿನ್‌ ಕುಮಾರ್‌ ಕಟೀಲು, ಡಾ| ಅಣ್ಣಯ್ಯ ಕುಲಾಲ್‌, ಹೇಮಂತ್‌ ಕುಮಾರ್‌, ವಿನಯ ನಾಯಕ್‌, ಸುದರ್ಶನ ಮೂಡಬಿದಿರೆ, ಎಂ.ಬಿ. ಪುರಾಣಿಕ್‌, ಗೋಪಾಲ್‌ ಕುತ್ತಾರ್‌, ಪ್ರವೀಣ್‌ ಕುತ್ತಾರ್‌, ಶಿವಾನಂದ ಮೆಂಡನ್‌, ಸುದರ್ಶನ್‌, ಜಗದೀಶ ಶೇಣವ, ಪುಷ್ಪರಾಜ್‌ ಜೈನ್‌, ಜಿತೇಂದ್ರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *