ಮಂಗಳೂರು: ಬಂಟರ ಸಂಘ ಕಾವೂರು ಇದರ ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳ ಗೊಂಡ 2014-15ನೇ ಸಾಲಿನ ಅಂತರ್ ಜಿಲ್ಲಾ ಬಂಟರ ಕ್ರೀಡೋತ್ಸ ವದಲ್ಲಿ ಸುರತ್ಕಲ್ ಬಂಟರ ಸಂಘವು 43 ಪದಕಗಳನ್ನು ಜಯಿಸಿ ಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹಗ್ಗಜಗ್ಗಾಟದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ
samagra prashasthi

 

 

 

ಸಮಗ್ರ ಪ್ರಶಸ್ತಿ ಪಡೆಯುತ್ತಿರುವುದು

hagga jaggata runners up
ಸುರತ್ಕಲ್ನ ಭವಿಷ್ ಶೆಟ್ಟಿ, ರೇಖಾ ಶೆಟ್ಟಿ, ಶೋಧನ್ ಶೆಟ್ಟಿ, ನಿಶಾಂತ್ ಶೆಟ್ಟಿ, ಮಣೀಷ್ ಶೆಟ್ಟಿ ವೈಯಕ್ತಿಕವಾಗಿ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದರು ಸುರತ್ಕಲ್ ಬಂಟರ ಸಂಘಕ್ಕೆ ಪುರುಷರ ವಿಭಾಗದಲ್ಲಿ ರಿಲೇಯಲ್ಲಿ ಪ್ರಥಮ ಸ್ಥಾನ, ಹಗ್ಗ ಜಗ್ಗಾಟದಲ್ಲಿ ಪುರುಷರು ದ್ವಿತೀಯ ಸ್ಥಾನ, ಮಹಿಳೆಯರ ರಿಲೇಯಲ್ಲಿ ತೃತೀಯ ಸ್ಥಾನ ಮತ್ತು ವೈಯಕ್ತಿಕ ವಿಭಾಗಗಳಲ್ಲಿ 19 ಚಿನ್ನ 11 ಬೆಳ್ಳಿ ಹಾಗೂ 13 ಕಂಚು ಪ್ರಶಸ್ತಿ ಪಡೆಯುವುದ ರೊಂದಿಗೆ ಸುರತ್ಕಲ್ ಬಂಟರ ಸಂಘವು ಅತೀ ಹೆಚ್ಚಿನ ಅಂಕ ಸಂಪಾದಿಸಿ ತಂಡಕ್ಕೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಸಮಾರೋಪ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ಉದ್ಯಮಿ ಭಾಸ್ಕರ್ ಶೆಟ್ಟಿ ಕಲ್ಯಾಣ್, ಕಾವೂರು ಬಂಟರ ಸಂಘದ ಅಧ್ಯಕ್ಷ ಎಂಎಸ್ ಶೆಟ್ಟಿ, ಗೌರವಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಪ್ರಧಾನ ಕಾರ್ಯದಶರ್ಿ
ಕೆ ಸದಾಶಿವ ಶೆಟ್ಟಿ, ರಾಮಣ್ಣ ಶೆಟ್ಟಿ ಮುಗಿಪು, ದಯಾನಂದ ಶೆಟ್ಟಿ, ವಿಠಲ ಆಳ್ವ ಮೊದಲಾದವರು ಉಪಸ್ಥಿತ ರಿದ್ದು, ವಿಜೇತರಿಗೆ ಪ್ರಶಸ್ತಿ ವಿತರಿಸಿ ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಕ್ರೀಡಾ ಕಾರ್ಯದಶರ್ಿ ದೇವೆಂದ್ರ ಶೆಟ್ಟಿ, ಗುಣಶೇಖರ ಶೆಟ್ಟಿ ನೀಲಾಧರ ಶೆಟ್ಟಿ, ಸೀತಾರಾಮ ರೈ ಸಮಗ್ರ ಪ್ರಶಸ್ತಿಯನ್ನು ಪಡೆದರು.

 

By suddi9

Leave a Reply

Your email address will not be published. Required fields are marked *