ಮಂಗಳೂರು: ಅತಿ ವೇಗವಾಗಿ ಬಂದ ಲಾರಿಯೊಂದು ಡಿಸ್ಕವರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಡಿ.30ರಂದು ಮಂಗಳೂರಿನ ಉಜ್ಜೋಡಿ ರಸ್ತೆಯಲ್ಲಿ ಸಂಭವಿಸಿದೆ. ಮೃತಪಟ್ಟ ದುರ್ದೈವಿಯನ್ನು ಪಾಂಡೇಶ್ವರದಲ್ಲಿ ಉಳಿದುಕೊಂಡಿದ್ದ ಕೋಟೆಕಾರ್ ನಿವಾಸಿ ಲತೀಶ್ ಕುಮಾರ್(29) ಎಂದು ಗುರುತಿಸಲಾಗಿದೆ.

ujjodi

ujjodi2
ಪಂಪ್ ವೆಲ್ ನಿಂದ ಗೋರಿಗುಡ್ಡೆಗೆ ಸಂಚರಿಸುವ ಬಸ್ ನ ಹಿಂದೆ ಲತೀಶ್ ತನ್ನ ಬೈಕ್ ನ ಮೇಲೆ ಉಜ್ಜೋಡಿಯಲ್ಲಿ ಕುಳಿತಿದ್ದರು. ಈ ವೇಳೆ ನವಯುಗ ಇಂಜಿನಿಯರಿಂಗ್ ಕಂಪೆನಿಯ ಲಾರಿಯೊಂದು ಬಂದು ಬಸ್  ಮುಂದೆ ಹಾದು ಹೋಗಿ ಲತೀಶ್ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಡಿಕ್ಕಿ ಹೊಡೆಯುವ ಮುನ್ನ ಲಾರಿ ಡ್ರೈವರ್ ತನ್ನ ಲಾರಿಯನ್ನಿನು ನಿಲ್ಲಿಸಲು ಯತ್ನಿಸಿದನಾದರೂ ಈ ವೇಳೆಗಾಗಲೇ ಲತೀಶ್ ಲಾರಿ ಡಿಕ್ಕಿ ಹೊಡೆದಾಗಿತ್ತು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ಸ್ಥಳದಲ್ಲೇ ಲತೀಶ್ ಮೃತಪಟ್ಟಿದ್ದಾರೆನ್ನಲಾಗಿದೆ.
ಮಾರ್ಕೆಟಿಂಗ್ ಏಜೆಂಗ್ ಆಗಿ ಕೆಲಸ ಮಾಡುತ್ತಿದ್ದ ಲತೀಶ್ ಪತ್ನಿ ಗರ್ಭಿಣಿ ಎಂದು ತಿಳಿದುಬಂದಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *