ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ (ರಿ) . ಬಂಟ್ವಾಳ ವಲಯದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪುಟ್ಟ ಪ್ರತಿಭೆ, ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಭಕ್ತಿಗೀತೆಗಳನ್ನು ಹಾಡಿ, 5 ಮಂತ್ರಗಳನ್ನು ಪಠಿಸಿ ಸಾಧನೆಗೈದು ಇಂಡಿಯಾ ಬುಕ್ ಅಫ್ ರೇಕಾಡ್೯ ವತಿಯಿಂದ “ಐಬಿಆರ್ ಎಚಿವರ್ ಗೌರವವನ್ನು ಪಡೆದ ಬಂಟ್ವಾಳದ ಪ್ರಾದ್ಯ ವೈ ಕುಲಾಲ್ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ರಾಜೇಂದ್ರ ಕೆ. ಗೌರವಾಧ್ಯಕ್ಷರಾದ ಕಿಶೋರ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್ ಯಾನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ವಲಯದ ಮಾಜಿ ಅಧ್ಯಕ್ಷ ರುಗಳಾದ ದಯಾನಂದ್ ಬಂಟ್ವಾಳ, ಹರೀಶ್ ರಾವ್, ಹರೀಶ್ ಮಾಣಿ,ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್,. ಹರೀಶ್ ನಾಟಿ, ರೋಷನ್ ಕಲ್ಲಡ್ಕ,ಬಾಲಕೃಷ್ಣ, ಪ್ರಶಾಂತ್ ಪೈ,ಸತೀಶ್,ವಿಕ್ರಮ್, ವಿಕೇಶ್,ಪ್ರಶಾಂತ್, ವಿವೇಕ್, ಮೋಹನ್ ದಾಸ್,, ಯೋಗೀಶ್ ರವರು ಉಪಸ್ಥಿತರಿದ್ದರು.
