ಬಂಟ್ವಾಳ: ಇಲ್ಲಿನ ವಟಪುರೇಶ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ “ಶ್ರೀ ಲಕ್ಷ ದೀಪೋತ್ಸವವು ಶನಿಬಾರ ವಿಜೃಂಭಣೆಯಿಂದ ಸಂಪನನಗೊಂಡಿತು.ಬೆಳಿಗ್ಗೆ ಮಹಾ ನೈವೇದ್ಯ, ಮಂಗಳಾರತಿ,ಹತ್ತು ಸಮಸ್ತರ ಪ್ರಾರ್ಥನೆಯ ಬಳಿಕ ಶ್ರೀ ದೇವರು ವನಕ್ಕೆ ಚಿತ್ರೈಸಿ ಅಲ್ಲಿ. , ವನದಲ್ಲಿ ಧಾತ್ರಿಹವನ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಪೂರ್ಣಾಹುತಿ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ,ನಂತರ “ವನಭೋಜನ”ನಡೆಯಿತು.

ಸಂಜೆ ಶ್ರೀ ದೇವಳದಲ್ಲಿ ಗರ್ಭಗೃಹ ಬಾಗಿಲು ತೆರೆದು ರಾತ್ರಿ ಪಟ್ಟದ ದೇವರಿಗೆ ರಾತ್ರಿ ಪೂಜೆ ನಡೆದರೆ, ವನದಲ್ಲಿ ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಉತ್ಸವ ಆರಂಭಗೊಂಡಿತು.
ಶ್ರೀ ದೇವರು ಸಣ್ಣ ಶಾಲೆಗೆ ಚಿತ್ತೈಸಿ ಪೂಜೆ ನಡೆದು ನಂತರ ಸಣ್ಣ ಗುರ್ಜಿಯಲ್ಲಿ ಪೂಜೆ ನೆರವೇರಿತು.ಬಳಿಕ ಹೂವಿನಿಂದ ಅಲಂಕೃತವಾದ ಬೆಳ್ಳಿಯ ಲಾಲಕಿಯಲ್ಲಿ ಬಡ್ಡಕಟ್ಟೆ ಹನುಮಂತ ದೇವಸ್ಥಾನದತ್ತ ತೆರಳಿ ಅಲ್ಲಿಂದ ಕಟ್ಟೆ ಪೂಜೆ ಮುಗಿಸಿ ವಾಪಸ್ ಅಗಮಿಸಿ ,ಭಾಮಿ ಜಂಕ್ಷನ್ ನಲ್ಲಿಮಿರ್ಮಿಸಲಾದ ದೊಡ್ಡ ಗುರ್ಜಿಯಲ್ಲಿ ಶ್ರೀ ದೇವರು ವಿರಾಜಿಸಿದ ಬಳಿಕ ಸ್ಥಳೀಯ ಕಲಾವಿದರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಶ್ರೀ ದೇವರಿಗೆ ಪ್ರಸನ್ನ ಪೂಜೆ, ಲಕ್ಷ ಆರತಿ ಸೇವೆ ನಡೆಯಿತು.ಇಲ್ಲಿಂದ
ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಪೂಜೆ, ಶ್ರೀ ಕಾಶೀ ಮಠದಲ್ಲಿ ಪೂಜೆ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ರೈಸಿದರು.ಶ್ರೀದೇವರ ಬೆಳ್ಳಿಯಲಾಲಕಿಯನ್ಮು ಭಜಕರು ಹೆಗಲಲ್ಲಿ ಹೊತ್ತು ಸಾಗಿದರು.ನೂರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ನೆರದಿದ್ದರು.ಬೆಳಗ್ಗಿನ ವರೆಗೂ ದೀಪೋತ್ಸವ ಕಾರ್ಯಕ್ರಮ ನಡೆಯಿತು.
