ಬಂಟ್ವಾಳ: ಆರೋಗ್ಯ, ಶಿಕ್ಷಣ, ಕಲೆ, ಕ್ರೀಡಾ ಕ್ಷೇತ್ರಗಳ ಉತ್ತೇಜನದ ಧ್ಯೇಯವಿರಿಸಿಕೊಂಡು ಸಮಾನ ಮನಸ್ಕರೊಡಗೂಡಿ ಪುಂಜಾಲಕಟ್ಟೆಯಲ್ಲಿ ಓಂ ಫ್ರೆಂಡ್ಸ್ ಪುಂಜಾಲಕಟ್ಟೆ ಎಂಬ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ. ಇದರ ನೂತನ ಪದಾಧಿಕಾರಿಗಳ ರಚನೆಯ ಸಭೆ ಪುಂಜಾಲಕಟ್ಟೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.

ಸಂಘದ ಸ್ಥಾಪಕ ನೂತನ ಅಧ್ಯಕ್ಷರಾಗಿ ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕ ಪ್ರಶಾಂತ್ ಎಂ. ಪುಂಜಾಲಕಟ್ಟೆ ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಅನಿಲಡೆ, ಚಿದಾನಂದ ಮಾಣಿಂಜ , ರತ್ನದೇವ್ ಪುಂಜಾಲಕಟ್ಟೆ.
ಪ್ರಧಾನ ಕಾರ್ಯದರ್ಶಿ ಯಾಗಿ ಜಯರಾಜ್ ಅತ್ತಾಜೆ , ಕಾರ್ಯದರ್ಶಿ ಆಗಿ ಕಿಶೋರ್ ಎಚ್. ಹಟ್ಟತ್ತೋಡಿ, ಜತೆ ಕಾರ್ಯದರ್ಶಿ ಸಂದೀಪ್ ಹಟ್ಟತ್ತೋಡಿ , ಕೋಶಾಽಕಾರಿ ಆಗಿ ಗಣೇಶ ಅನಿಲಡೆ ಗೌರವ ಸಲಹೆಗಾರರಾಗಿ ಓಂ ಪ್ರಸಾದ್ ಬಾರ್ಧಿಲ ಬಿ.ಸಿ. ರೋಡ್, ಪ್ರಶಾಂತ್ ಪ್ರತಿಮಾ ಪಾರೆಂಕಿ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿಸಮಿತಿ ಸದಸ್ಯರಾಗಿ ಸುಧಾಕರ್ ನಾಕುನಾಡು , ಅರುಣ್ ಹೆಗ್ಡೆ ಪುರಿಯ, ಜಯಂತ್ ಭಂಡಾರಿ ವಳಬೈಲು, ಯಶೋಧರ ನಾಕುನಾಡು , ಧೀರಜ್ ನಿಡ್ವಳ್, ನವೀನ್ ಕುಡುಮೇರು,ಕೃಷ್ಣಪ್ಪ ಮಾಡ, , ಪ್ರದೀಪ್ ಕಜೆಕಾರು, ಧರ್ಣಪ್ಪ ಬಂಗೇರ, ರಘುವೀರ್ ಬಾಳಿಗಾ, ಮಂಜುನಾಥ ದಾಸ್, ವಿನೀತ್ ಮಾನ್ಯ, ಬಾಲಕೃಷ್ಣ ನಾಯಕ್, ಸತೀಶ್ ಆಚಾರ್ಯ ಬೆರ್ಕಳ, ಕಿಶೋರ್ ಮೂರ್ಜೆ, ಪ್ರಕಾಶ್ ಅನಿಲಡೆ, ಆರ್ಡಿಎಸ್ ರಫೀಕ್, ಭಾಸ್ಕರ ಬಸವನಗುಡಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
