ಬಂಟ್ವಾಳ: ಇತಿಹಾಸ ಪ್ರಸಿದ್ದ ಶ್ರೀ ಪಣೋಲಿಬೈಲು ಶ್ರೀ ಕಲ್ಲುರ್ಟಿ- ಕಲ್ಕುಡ ದೈವಸ್ಥಾನದಲ್ಲಿ ಬುಧವಾರ ರಾತ್ರಿ ವಾರ್ಷಿಕ ಕೋಲೋತ್ಸವ ಸಂಪನ್ನಗೊಂಡಿತು.

ಇದಕ್ಕು ಮೊದಲು ಭಂಡಾರ ಮನೆಯಿಂದ ವೈಭವಪೂರ್ಣವಾಗಿ ದೈವಸ್ಥಾನಕ್ಕೆ ಭಂಡಾರ ಅಗಮಿಸಿತು.ಬಳಿಕ ಕ್ಷೇತ್ರದ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳಿಗೆ ಕೋಲೋತ್ಸವ ನಡೆಯಿತು.
ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ,ಚಾಕಿರಿದಾರರ, ಸ್ಥಳೀಯ ಪ್ರಮುಖರು,ಗಣ್ಯರು ಸಹಿತ ಸಾವಿರಾರು ಮಂದಿ ಭಕ್ತರು ಕಲ್ಲುರ್ಟಿ- ಕಲ್ಕುಡ ದೈವದ ಕೋಲವನ್ನು ಕಣ್ತುಂಬಿಕೊಂಡರು.
