ಬಂಟ್ವಾಳ: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ  ಸಲೀಂ ಅಹ್ಮದ್ ಅವರು ಮಂಗಳವಾರ ಸಂಜೆ ಬಂಟ್ವಾಳ ತಾ.ನ ಕಳ್ಳಿಗೆಯಲ್ಲಿರುವ ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಕೆಂದ್ರದ ಮಾಜಿ ಸಚಿವ ರಮಾನಾಥ ರೈ ಅವರ ನಿವಾಸಕ್ಕೆ ಭೇಟಿ ನೀಡಿದರು.‌


ಈ ಸಂದರ್ಭದಲ್ಲಿ ಸಭಾಪತಿ ಸಲೀಂ ಆಹ್ಮದ್ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರು   ಸೌಹಾರ್ದಯುತ ಮಾತುಕತೆ ಹಾಗೂ ಒಂದಷ್ಟು ರಾಜಕೀಯ ಸಮಾಲೋಚನೆ ನಡೆಸಿದರಲ್ಲದೆ ಸಂಜೆಯ ಉಪಹಾರವನ್ನು ಸೇವಿಸಿ ಬಳಿಕ‌ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಅರ್ಶೀವಾದ ಪಡೆದರು.


ಸಭಾಪತಿಯವರ ಭೇಟಿಯ ವೇಳೆ ಪಕ್ಚದ ಮುಖಂಡರಾದ ಚಮನಧರಪ್ರಕಾಶ್ ಶೆಟ್ಟಿ ತುಂಬೆ,ಪಿಯೂಸ್ ರೋಡ್ರಿಗಸ್,ಬೇಬಿಕುಂದರ್, ಬಾಲಕೃಷ್ಣ ಅಂಚನ್ ,ಸದಾಶಿವ ಬಂಗೇರ,ತಾರನಾಥವಶೆಟ್ಟಿ ಕಳ್ಳಿಗೆ,ವೆಂಕಪ್ಪ ಪೂಜಾರಿ ಬಂಟ್ವಾಳ,ಸಿದ್ದಿಕ್ ಗುಡ್ಡೆಯಂಗಡಿ ಮೊದಲಾದವರಿದ್ದರು.

By Suddi9