ಬಂಟ್ವಾಳ: ಕೃಷಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಪಿಎಂಆರ್ಕೆವಿವೈ ವಿವೇಚನಾಯುಕ್ತ ಪೀಡೆನಾಶಕ ಬಳಕೆ ಕುರಿತ ರೈತ ಅರಿವು ಕಾರ್ಯಕ್ರಮದಡಿ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವು ಬಂಟ್ಚಾಳ ತಾ.ಪಂ.ನ ಎಸ್ ಜಿ ಎಸ್ ವೈ ಸಭಾಂಗಣದಲ್ಲು ಗುರುವಾರ ನಡೆಸಲಾಯಿತು.

ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತೋಟಗಾರಿಕಾ ಇಲಾಖೆಯಹಿರಿಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿ ಸೋಜಾ ಅವರು “ವಿವೇಚನಾಯುಕ್ತ ಪೀಡೆನಾಶಕ ಬಳಕೆ” ಕುರಿತು ರೈತರಿಗೆ ಮಾಹಿತಿ ನೀಡಿದರು.
ತಾಲೂಕು ಕೃಷಿ ಅಧಿಕಾರಿ( ತಾಂತ್ರಿಕ)ನಂದನ್ ಶೆಣೈ ಪಿ.,ಅವರು ರೈತರಿಗೆ ಮುಖ್ಯಮಂತ್ರಿ ನೇಗಿಲ ಯೋಜನೆ ಹಾಗೂ ರಸಗೊಬ್ಬರ ಮಾರಾಟ ಚೌಕಟ್ಟು ಮೊಬೈಲ್ ಆಪ್ ಕುರಿತು ತಾಂತ್ರಿಕ ಮಾಹಿತಿ ನೀಡಿದರೆ,ಪಾಣೆಮಂಗಳೂರು ಆತ್ಮ ಎಟಿಎಂ
ಹನಮಂತ ಕಾಳಗಿ ಅವರು ಕೃಷಿ ಇಲಾಖಾ ಮಾಹಿತಿ ನೀಡಿದರು.ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ ಆರ್ ಪ್ರಸ್ತಾವನೆಗೈದರು.ಚಂದ್ರಕಲಾ ಎಟಿಯಂ ಇವರು ಸ್ವಾಗತಿಸಿದರು.ವಿರೂಪಾಕ್ಷಿ ಹಡಪದ ಎಟಿಯಂ ವಿಟ್ಲ ಅವರು ವಂದಿಸಿದರು.
ಆತ್ಮ ಯೋಜನೆ ಬಂಟ್ವಾಳಬಿಟಿಯಂ ಕು.ಸ್ನೇಹಾಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ಕೃಷಿ ಪರಿಕರ ಮಾರಾಟಗಾರರು, ಕೃಷಿ ಸಖಿಯರು, ಗ್ರಾಮ ಒನ್, ಸಿಎಸ್ ಸಿ ಕೇಂದ್ರದ ಸಿಬ್ಬಂದಿಗಳು, ರೈತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
