ಬಂಟ್ವಾಳ:ಸಜೀಪಮೂಡ ಗ್ರಾಮದ ಸಜಿಪದ ಬಿರುವೆರ್ ಇದರ ಆಶ್ರಯದಲ್ಲಿ “ಸಾಮರಸ್ಯ ಸಂಗಮ ತುಳುನಾಡ ತುಡಾರ್ ಪರ್ಬ ಗೂಡು ದೀಪ ಪಂಥ 2026 “ಕಾರ್ಯಕ್ರಮ ನೆರವೇರಿತು‌.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಅವರು ತುಳುನಾಡ ಹಬ್ಬಗಳ ಆಚರಣೆಯ ಮಹತ್ವ ವನ್ನು ವಿವರಿಸಿದರು.ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ
ಸಂಜೀವ ಪೂಜಾರಿ ಬಿರ್ವ ಸಭಾಧ್ಯಕ್ಷತೆ ವಹಿಸಿದ್ದರು.


ಇದೇ ವೇಳೆ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಸಿ ಭಂಡಾರಿ ಅವರನ್ನು ಗೌರವಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ರಾಜಾ ಚಂಡ್ತಿಮಾರ್,ಮಂಗಳೂರು ವಿ.ವಿ.ಯ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಬಂಟ್ವಾಳ ಆರ್ ಟಿ ಒ ಅಧಿಕಾರಿ ಚರಣ್ ಕೆ,ಮಂಗಳೂರು ಗ್ರಾಮಾಂತರ ಜಿಲ್ಲೆ ವಿ.ಹಿಂ.ಪ.ಕಾರ್ಯದರ್ಶಿ ಸಚಿನ್ ಮೆಲ್ಕಾರ್ ,ಮಂಗಳೂರು ಗ್ರಾಮಾಂತರ ಜಿಲ್ಲೆ ಸಾಮರಸ್ಯ ಗತಿ ವಿಧಿ ಜಿಲ್ಲಾ ಸಂಯೋಜಕ ಭರತ್ ಕುಮಾರ್ ಮಂಜ ನಾಡಿ , ನಿತಿನ್ ಪೂಜಾರಿ, ಕಮಲ ಮೊಂಟೆಪದವು ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಶಂಕರನಾರಾಯಣ ಐತಾಳ ಓಣಿ ಬೈಲು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ  ಅಧ್ಯಕ್ಷ ಬೇಬಿ ಕುಂದರ್, ಎಂ.ಕೆ ಶಿವ, ಯೋಗೀಶ ಬೆಳ್ಚಡ, ಜಗದೀಶ ಗೌಡ ಯಕ್ಷಗಾನ ಕಲಾವಿದ ,ಭಾಸ್ಕರ ದೇವಾಡಿಗ, ಶಂಕರ ಯಾನೆ ಕೋಚ ಪೂಜಾರಿ ಸಾನದ ಮನೆ, ರಮೇಶ್ ಕುಲಾರ್ , ಅಶೋಕಗಟ್ಟಿ , ಕೇಶವ ಕುಂದರ್, ದಿನೇಶ ಗಾಣಿಗ, ವೆಂಕಪ್ಪ ನಾಯಕ, ದೇವದಾಸ್ ಭಂಡಾರಿ, ಸತೀಶ ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು 

By Suddi9