ಬಂಟ್ವಾಳ: ಇಲ್ಲಿನ ಬ್ರಹ್ಮರಕೊಟ್ಲು ದ.ಕ. ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ  ಸ್ಕೌಟ್ಸ್, ಗೈಡ್ಸ್, ಭಾರತ್ ಸೇವಾದಳ ಹಾಗೂ  ವಿದ್ಯಾರ್ಥಿಗಳು ಸೇರಿ ಶಾಲಾ ಪರಿಸರ ಮತ್ತು ಶಾಲಾ ಪಕ್ಕದಲಿರುವ ಬಸ್ ನಿಲ್ದಾಣ ಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಚಿತ್ರ ಬಿಡಿಸುವ ಮೂಲಕ ಸುಂದರ ಗೊಳಿಸಿದರು.  ಶಾಲಾ ಮುಖ್ಯ ಶಿಕ್ಷಕಿ ಪೋಲಿನ್ ಲೀನಾ ಹಾಗೂ ಸ್ಕೌಟ್ಸ್ ಶಿಕ್ಷಕಿ  ವೇದಾವತಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯ ನಡೆಸಿದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತ ಮೊಹಮ್ಮದ್ ತುಂಬೆ, ಕಾರ್ಯದರ್ಶಿ ಪ್ರತಿಮಾ, ಶಾಲಾ ಶಿಕ್ಷಕಿ ಭಾರತಿಶೇಷಪ್ಪ,ತರಬೇತಿ ಶಿಕ್ಷಕಿಯರಾದ ಕು. ವೈಶಾಲಿ,ಕು.ಚೈತ್ರ ಸಹಕರಿಸಿದರು.
ಮಕ್ಕಳ ಈ ಸಮಾಜಮುಖಿ ಕಾರ್ಯವನ್ನುಗ್ರಮಸ್ಥರು  ಮುಕ್ತ ಕಂಠದಿಂದ ಶ್ಲಾಘಸಿದರು.ಮಕ್ಕಳಿಗೆ ಸ್ಥಳೀಯರು ಲಘು ಉಪಹಾರ, ತಂಪು ಪಾನೀಯ, ಕಬ್ಬಿನ ರಸ, ಐಸ್ಕ್ರೀಮ್ ಮೊದಲಾದವುಗಳನ್ನು ನೀಡಿ ಸಹಕರಿಸಿದರು. 

By Suddi9