ಬಂಟ್ವಾಳ:ಶ್ರೀ ವೆಂಕಟರಮಣ ಸ್ವಾಮಿ ದೇವಳ ಪದವಿಪೂರ್ವ ಕಾಲೇಜಿನ ಮೂರನೇ ವಾರ್ಷಿಕ ಕ್ರೀಡಾಕೂಟ 2026 ಎಸ್. ವಿ. ಎಸ್ ದೇವಳ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಿತು.

ಆಡಳಿತ ಮಂಡಳಿ ಸದಸ್ಯ ಶಿವಾನಂದ ಬಾಳಿಗಾ ಅವರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳು ಪಾಠದ ಜೊತೆಗೆ ಪಾಠೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಅವರ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ ಎಂದರು.
ನ್ಯಾಯವಾದಿ ವೆಂಕಟರಮಣ ಶೆಣೈ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವೆಂದರು.
ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ ಅವರು ಶುಭ ಹಾರೈಸಿದರು. ಮೋಕ್ಷಿತ ದೇವಾಡಿಗ ಇವರು ಕ್ರೀಡಾಕೂಟ ಪ್ರತಿಜ್ಞೆಯನ್ನು ನೆರವೇರಿಸಿದರು. ಉಪನ್ಯಾಸಕ ವೆಂಕಟೇಶ ನಾಯಕ್ ಸ್ವಾಗತಿಸಿ,ನಿರೂಪಿಸಿದರು. ಉಪನ್ಯಾಸಕ ಅಲನ್ ವಂದಿಸಿದರು. ಬಳಿಕ ವಿವಿಧ ಕ್ರೀಡೆಗಳು ನಡೆಯಿತು.
