ಮಂಗಳೂರು : ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಗಾರಿಕಾ ವಲಯದ ನಾರ್ಲಪದವು ಎಂಬಲ್ಲಿ ನವಂಬರ್ 6ರಂದು ಚಿಲ್ಲರೆ ಮತ್ತು ರಖಂ ಮದ್ಯ ಮಾರಾಟದ ಎಸ್. ಎಲ್. ವಿ ವೈನ್ಸ್ ಎಂಆರ್ಪಿ ಔಟ್ಲೆಟ್ ಶುಭಾರಂಭಗೊoಡಿದೆ.

ಶುಕ್ರವಾರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾಚರಣ್ ಭಂಡಾರಿ ಮೊಗರು ಗುತ್ತು, ಚಂದ್ರಹಾಸ ಶೆಟ್ಟಿ ನಾರಳ, ಅಮರ್ ಎಸ್. ಭಂಡಾರಿ, ಸುನಿಲ್ ಫರ್ನಾಂಡಿಸ್, ಜಯಾನಂದ ಕುಲಾಲ್, ಸೋಹನ್ ಅತಿಕಾರಿ, ತಮ್ಮಯ್ಯ ಪೂಜಾರಿ, ಸಂತೋಷ್ ಶೆಟ್ಟಿ ಮೊಗರು ಗುತ್ತು ಮತ್ತು ಸ್ಥಳೀಯ ಹಾಗೂ ಪರವೂರ ಗಣ್ಯರು ಭಾಗಹಿಸಿ ಎಸ್. ಎಲ್. ವಿ ವೈನ್ಸ್ ಎಂಆರ್ಪಿ ಔಟ್ಲೆಟ್ಗೆ ಶುಭ ಕೋರಿದರು. ಭವಾನಿ ಶಂಕರ್ ಶೆಟ್ಟಿ ಮೊಗರು ಗುತ್ತು ಅವರು ಗಣ್ಯರನ್ನು ಸ್ವಾಗತಿಸಿ ಅಭಿನಂದಿಸಿದರು.

ಉದ್ಯಮಿಗಳಾದ ಮಂಜ ನಾಯ್ಕ್ ಮಂಗಳೂರು ಮಾಲಕತ್ವ ಹಾಗೂ ಜಗದೀಶ್ ಮಂಗಳೂರು, ಮಂಜಪ್ಪ ಮಂಗಳೂರು, ರಾಧಾಕೃಷ್ಣ ರೈ ಮಂಗಳೂರು, ಅರುಣ್ ಶೆಟ್ಟಿ ಮೊಗರು ಗುತ್ತು ಪಾಲುಗಾರಿಕೆಯಲ್ಲಿ ನಾರ್ಲಪದವು `ಹರಿಲೀಲಾ’ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಈ ಮದ್ಯದ ಔಟ್ಲೆಟ್ ತೆರೆದುಕೊಂಡಿದೆ.

ಇಲ್ಲಿ ದುಬಾರಿಯಲ್ಲದ ಮತ್ತು ಕೈಗೆಟಕುವ ಬೆಲೆಯಲ್ಲಿ ಎಲ್ಲ ಬ್ರಾಂಡಿನ ಮದ್ಯ ಲಭ್ಯವಿದೆ. ಗಂಜಿಮಠ ಹಾಗೂ ಗುರುಪುರ ಕೈಕಂಬಕ್ಕೆ ಅತಿ ಹತ್ತಿರದಲ್ಲಿ ತೆರೆದುಕೊಂಡಿರುವ ಈ ಮದ್ಯ ಮಾರಾಟದಂಗಡಿ ಕೈಗಾರಿಕಾ ವಲಯ ಹಾಗೂ ಸುತ್ತಲ ಪ್ರದೇಶದ ಮದ್ಯಪ್ರಿಯರನ್ನು ಆಕರ್ಷಿಸಿದರೆ ಅಚ್ಚರಿ ಪಡಬೇಕಿಲ್ಲ.
