ಗುರುಪುರ : ೭ ಸ್ಟಾರ್ ಫ್ರೆಂಡ್ಸ್ ವಾಮಂಜೂರು ಇದರ ಲೋಗೊ ಅನಾವರಣ ಮತ್ತು `ದಫ್’ ಸ್ಪರ್ಧೆಯ ದಿನಾಂಕ ಘೋಷಣೆ ಕಾರ್ಯಕ್ರಮ ಅ. ೫ರಂದು ವಾಮಂಜೂರು ಜಂಕ್ಷನ್‌ಗೆ ಹತ್ತಿರದ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ವಾಮಂಜೂರು ಮಸೀದಿ ಧರ್ಮಗುರುಗಳಾದ ಮೊಹಮ್ಮದ್ ಫಾಯಿಝ್ ಪಾಲಿಲಿ ಅವರು ಮಾತನಾಡಿ, ಇಸ್ಲಾಂನಲ್ಲಿ ಸ್ಟಾರ್‌ಗೆ(ನಕ್ಷತ್ರ) ಬಹಳಷ್ಟು ಮಹತ್ವವಿದೆ. ೭ ಸ್ಟಾರ್ ಎಂದು ಕರೆಯಲ್ಪಡುವ ಈ ಸಂಘಟನೆಯ ಬಲ ೭ರಿಂದ ೭೦೦ಕ್ಕೆ ಏರಲಿ. ಆರ್ಥಿಕವಾಗಿ ಕಷ್ಟದಲ್ಲಿರುವ ಹಾಗೂ ಮದುವೆ ಮತ್ತಿತರ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಆಶಾಕಿರಣವಾಗಿ ಕೆಲಸ ಮಾಡುವ ಶಕ್ತಿ ಅಲ್ಲಾಹು ನೀಡಲಿ ಎಂದು ಹರಸಿದರು.

ಮೂಡುಶೆಡ್ಡೆ ಜುಮ್ಮಾ ಮಸೀದಿ ಧರ್ಮಗುರು ಹುಸೈನ್ ಕಳಸ, ಕೆತ್ತಿಕಲ್ ಜುಮ್ಮಾ ಮಸೀದಿ ಧರ್ಮಗುರು ಇಲ್ಯಾಸ್ ಸಅದಿ, ಧರ್ಮಗುರು ಜಾಫರ್ ಅವರು ಸಂಘಟನೆಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಮಂಜೂರಿನಲ್ಲಿ ೭ ಸ್ಟಾರ್ ಫ್ರೆಂಡ್ಸ್ ಆಯೋಜಿಸಲಿರುವ `ದಫ್’ ಸ್ಪರ್ಧೆಗೆ ಡಿಸೆಂಬರ್ ೨೬ರ ದಿನ ನಿಗದಿಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಅಶ್ರಫ್ ವಾಮಂಜೂರು ಅವರ ಮಗಳ ಮದುವೆಗೆ ಆರ್ಥಿಕ ನೆರವು, ದೆಬ್ಬೆಲಿ ಎಲ್ಯಾರ್‌ಪದವಿನ ಮಸೀದಿಗೆ ಏಣಿ ಹಾಗೂ ಒಂದು ವರ್ಷದ ವಿದ್ಯುತ್ ಬಿಲ್ ಮೊತ್ತ ಕೊಡುಗೆಯಾಗಿ ನೀಡಲಾಯಿತು. ಉದ್ಯಮಿ ಎಂಎಚ್‌ಟಿ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು. ಉಮ್ರಾ ಯಾತ್ರೆಗೈಯಲಿರುವ ಸಂಘಟನೆಯ ಉಪಾಧ್ಯಕ್ಷ ರಿಯಾಝ್ ಐಬಿ ಅವರಿಗೆ ಸಂಘಟನೆಯ ಪದಾಧಿಕಾರಿಗಳು ಶುಭ ಕೋರಿದರು.

ಸಮಾರಂಭದಲ್ಲಿ ಕೆತ್ತಿಕಲ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ವಾಮಂಜೂರು ಜುಮ್ಮಾ ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್, ವಾಮಂಜೂರು ಯಂಗ್‌ಮೆನ್ಸ್ ಅಧ್ಯಕ್ಷ ಪಿ. ನಜೀರ್, ವಾಮಂಜೂರು ನೇತಾಜಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಲೀಂ ಮಲ್ಲಿಕ್, ಅಲ್ ಹುದಾ ಯಂಗ್‌ಮೆನ್ಸ್ ಕೆತ್ತಿಕಲ್ ಇದರ ಅಧ್ಯಕ್ಷ ಅಬ್ದುಲ್ ಬಶೀರ್, ಉಪಾಧ್ಯಕ್ಷ ಅನ್ಸಾರ್ ಕೆತ್ತಿಕಲ್, ಮುಸ್ತಫಾ ಕೆತ್ತಿಕಲ್, ಸಂಘಟನೆಯ ಗೌರವಾಧ್ಯಕ್ಷ ಮನ್ಸೂರ್ ಅಲಿ ದೆಬ್ಬೆಲಿ, ಅಧ್ಯಕ್ಷ ಜಮಾಲ್, ಪದಾಧಿಕಾರಿಗಳಾದ ಸಿರಾಜ್, ರಜಾಕ್ ಕೆತ್ತಿಕಲ್, ಶರೀಫ್, ಮಜೀದ್, ಮುಸ್ತಫಾ, ತನ್ಸೀಫ್ ಹಾಗೂ ಸ್ಥಳೀಯ ಪ್ರಮುಖರು ಇದ್ದರು. ಕಲಂದರ್ ಶಾಫಿ ಗುರುಪುರ ಅವರು ಕಾರ್ಯಕ್ರಮ ನಿರೂಪಿಸಿದರು. ಧರ್ಮಗುರು ಇಲ್ಯಾಸ್ ಸಅದಿ ವಂದಿಸಿದರು.

By Suddi9

Leave a Reply

Your email address will not be published. Required fields are marked *