ಬಂಟ್ವಾಳ: ವಂದೇ ಮಾತರಂ ಗೀತೆಯ 150 ನೇ ವರ್ಷಾಚರಣೆ ಹಾಗೂ ಅಖಂಡ ಭಾರತ ಸಂಕಲ್ಪದಿನದ ಅಂಗವಾಗಿ ಮಂಗಳೂರು ಗ್ರಾಮಾಂತರ ಜಿಲ್ಲೆಯ ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ,ಬಜರಂಗದಳ ವತಿಯಿಂದ ಭಾನುವಾರ ಬೆಳಿಗ್ಗೆ ಬಂಟ್ವಾಳದಲ್ಲಿ ತಿರಂಗಾ ಯಾತ್ರೆಯ ವಾಹನ ಜಾಥ ನಡೆಯಿತು.

ಬಂಟ್ವಾಳ ಬಡ್ಡಕಟ್ಟೆ ಹನುಮಾನ್ ದೇವಸ್ಥಾನದ ವಠಾರದಲ್ಲಿ ವಾಹನ ಜಾಥಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಾಥವು ಬಂಟ್ವಾಳ ಪೇಟೆಯಾಗಿ ಬೈಪಾಸ್ ಜಂಕ್ಷನ್ ಗೆ ಬಂದು ಅಲ್ಲಿಂದ ನೇರವಾಗಿ ಹೆದ್ದಾರಿ ಮೂಲಕ ಬಿ.ಸಿ.ರೋಡು ಸರ್ಕಲ್ ದಾಟಿ ರಾಜಾರಸ್ತೆಯಲ್ಲಿ ಕೈಕಂಬ ಪೊಳಲಿ ದ್ವಾರದವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಿ ದೇವಸ್ತರಾನದ ವಠಾರದಲ್ಲಿ ಸಂಪನ್ನಗೊಂಡಿತು.

ನೂರಕ್ಕು ಅಧಿಕ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳ ಹಾಗೂ ಕಾರುಗಳಲ್ಲಿ ವಿ.ಹಿ.ಪ., ಬಜರಂಗದಳ,ಬಿಜೆಪಿ ಕಾರ್ಯಕರ್ತರು ಜಾಥದಲ್ಲಿ ಭಾಗವಹಿಸಿದ್ದರು.
ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ವಿ.ಹಿ.ಪ.ಮುಖಂಡರಾದ ಸಂತೋಷ್ ಸರಪಾಡಿ,ದಿನೇಶ್ ಪುತ್ತೂರು,ಬರಂಗದಳದ ಮುಖಂಡರಾದ ಲೋಹಿತ್ ಪಣೋಲಿಬೈಲ್,ಸಚ್ಚಿನ್ ಮೆಲ್ಕಾರ್,ಬಿಜೆಪಿ ಮುಖಂಡರಾದ ರಾಮದಾಸ್ ಬಂಟ್ವಾಳ,ಸಂದೇಶ್ ಶೆಟ್ಟಿ ಅರೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
