ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ 22 ನೇಯ ಸಂಪರ್ಕ ಸಭೆಯು ನರಿಕೊಂಬು ಗ್ರಾಮದ ಶ್ರೀನಿಧಿ ಭಟ್ ಮನೆಯಲ್ಲಿ ನಡೆಯಿತು.ಕೂಟ ಮಹಾಜಗತ್ತು ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷರಾದ ಕೆ.ರಮೇಶ್ ಹೊಳ್ಳ ಅಧ್ಯಕ್ಷತೆ ವಹಿಸಿ ಸೆ. 27ರಂದು ಮಂಗಳೂರಿನಲ್ಲಿ ನಡೆಯುವ ಕೇಂದ್ರ ಸಮಿತಿಯ ಮಹಾಸಭೆಯ ಮಾಹಿತಿ ನೀಡಿದರು.

ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಅವರು ಸಭೆಯಲ್ಲಿ ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿಯ ಕಾರ್ಯಗಳ ಮಾಹಿತಿ ಪ್ರಸ್ತುತ ದೇವಾಲಯದ ವಿದ್ಯಮಾನಗಳ ಚಿತ್ರಣದ ಮಾಹಿತಿ ನೀಡಿದರು.
ಮುಂಬೈ ಅಂಗ ಸಂಸ್ಥೆಪ್ರತಿನಿಧಿ ಸೂರ್ಯನಾರಾಯಣ ಹೊಳ್ಳ ಬ್ರಾಹ್ಮಣ ಸಮಾಜದ ಯುವ ಜನತೆಯ ವಿವಾಹ ಸಂಪರ್ಕ ಮಾಹಿತಿ ನೀಡಿದರು. ಗೌರವಾಧ್ಯಕ್ಷ ಜಯಶಂಕರ ಭಾಸ್ರಿತ್ತಾಯ, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಜಿಲ್ಲಾ ಅರ್ಚಕ ಮತ್ತು ಪುರೋಹಿತ ಪರಿಷತ್ ಅಧ್ಯಕ್ಷ ಕರ್ಬೆಟ್ಟು ಕೃಷ್ಣರಾಜ ಭಟ್, ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಸೋಮಯಾಜಿ, ಪದಾಧಿಕಾರಿಗಳಾದ ಎಂ.ರಾಮಕೃಷ್ಣ ರಾವ್, ಎ ರವಿಶಂಕರ ಮಯ್ಯ, ಎಂ. ಜಯರಾಮ ಮಯ್ಯ,ಜಗದೀಶ ಹೊಳ್ಳ ,ಮಹಿಳಾ ಸಮಿತಿ ಅಧ್ಯಕ್ಷೆ ಯಮುನಾ ಐಗಳ್, ಉಪಾಧ್ಯಕ್ಷೆ ಜಯಲಕ್ಷ್ಮಿ ರಾವ್,ನರೇಶ ಹೊಳ್ಳ, ಮೊದಲಾದವರು ಉಪಸ್ಥಿತರಿದ್ದರು
