ಬಂಟ್ವಾಳ: ಬಂಟರ ಸಂಘ ವಾಮದಪದವು ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಆಲದಪದವಿನಲ್ಲಿರುವ ಸಂಘದ ನಿವೇಶನದಲ್ಲಿ ನಡೆಯಿತು. ಬಂಟ್ವಾಳ ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಪಿ.ರೈ ಕಲ್ಲಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟರ ಸಂಘ ವಾಮದಪದವು ವಲಯದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಮುಂಡಡ್ಕಗುತ್ತು ಯಜಮಾನ ರತ್ನಾಕರ ಶೆಟ್ಟಿ, ಬಂಟ್ವಾಳ ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರ್ಗುತ್ತು ಅತಿಥಿಗಳಾಗಿ ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವಾಮದಪದವು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪನ್ಯಾಸಕಿ ಡಾ| ಸುಧಾರಾಣಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ತುಳುನಾಡಿನಲ್ಲಿ ಕೃಷಿಕರ ಆಟಿ ತಿಂಗಳ ಕಷ್ಟಕರ ಬದುಕಿನ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವಾಗಿ ಆಟಿದ ಕೂಟ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ. ಕಷ್ಟಕರ ತಿಂಗಳಾದ ಆಟಿಯಲ್ಲಿ ನಮ್ಮ ಹಿರಿಯರು ಆಹಾರದ ಹುಡುಕಾಟದಲ್ಲಿ ಔಷಧಿಯ ವಸ್ತುಗಳನ್ನು ಕಂಡು ಹುಡುಕಿದರು. ಇಂದು ಪಾಶ್ಚಾತ್ಯ ತಿಂಡಿ ತಿನಸುಗಳ ಒಲವಿನಲ್ಲಿ ನಮ್ಮ ಪರಂಪರೆಯ ಆಹಾರಗಳನ್ನು ಮರೆತು ಆರೋಗ್ಯ ಹಾಳು ಮಾಡುತ್ತಿದ್ದೇವೆ. ಇದು ಆಚರಣೆಗೆ ಸೀಮಿತವಾಗದೇ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶುಭ ಹಾರೈಸಿದರು. ಪುಣಚ ಮಹಿಷ ಮರ್ಧಿನಿ ದೇವಸ್ಥಾನದ ಅಧ್ಯಕ್ಷ ಮಾರಪ್ಪ ಶೆಟ್ಟಿ ಬಲುಗುತ್ತು, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರ್ಗುತ್ತು, ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಂಟ್ವಾಳ ಬಂಟರ ಸಂಘ ಮಹಿಳಾ ವಿಭಾಗದ ಜತೆ ಕೋಶಾಽಕಾರಿ ಶ್ರೀ ವಿದ್ಯಾ ಎ.ರೈ, ಕಾವಳಕಟ್ಟೆ ಬಂಟರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಯುವ ವಿಭಾಗ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟಾರಬೆಟ್ಟುಗುತ್ತು, ಮಹಿಳಾ ವಿಭಾಗ ಅಧ್ಯಕ್ಷೆ ಚೇತನಾ ಆರ್.ಶೆಟ್ಟಿ ದಂಡೆ, ಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ಪ್ರ.ಕಾರ್ಯದರ್ಶಿ ಗಂಗಾಧರ ಶೆಟ್ಟಿ ಕೋಡ್ಯೇಲು ಬಾಳಿಕೆ, ಕಾರ್ಯದರ್ಶಿ ಯಶೋಧರ ಶೆಟ್ಟಿ ದಂಡೆ, ಕೋಶಾಧಿಕಾರಿ ವಸಂತ ಶೆಟ್ಟಿ ಕಲಾಕುಂಜ, ಯುವ ವಿಭಾಗ ಕಾರ್ಯದರ್ಶಿ ದೀಕ್ಷಿತ್ ಶೆಟ್ಟಿ ಬುಳೇರಿ, ಕ್ರೀಡಾ ಕಾರ್ಯದರ್ಶಿ ನವೀನ್ ಶೆಟ್ಟಿ ಪಂಜೊಟ್ಟು,ಸಂಘಟನಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರು, ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಶೆಟ್ಟಿ ವಿಜಯನಗರ, ಮಹಿಳಾ ವಿಭಾಗ ಪ್ರ.ಕಾರ್ಯದರ್ಶಿ ಶೋಭಾ ವಿ.ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ರಾದ ಅಮ್ಮು ರೈ ಹರ್ಕಾಡಿ ದಂಪತಿಯ ಐವತ್ತನೇ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಂಬಿನಂದಿಸಲಾಯಿತು. ಮಕ್ಕಳಿಗೆ ನಡೆದ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪರಿಚಯ ಮತ್ತು ಭೋಜನ ನಡೆಯಿತು.ಕೃತಿ ಕೇದಗೆ ಸ್ವಾಗತಿಸಿದರು. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಪ್ರಸ್ತಾವಿಸಿದರು.ಯಶೋಧರ ಶೆಟ್ಟಿ ದಂಡೆ ವಂದಿಸಿದರು. ರಮೇಶ್ ಶೆಟ್ಟಿ ವಾಮದಪದವು ಮತ್ತು ಗಂಗಾಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
