ಬಂಟ್ವಾಳ: ತಾಲೂಕು ಪಂಚಾಯಿತಿ ಬಂಟ್ವಾಳ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ “ಆಟಿದ ಗಮ್ಮತ್ ” ಕಾರ್ಯಕ್ರಮವವು ಬಿ.ಸಿ.ರೋಡಿನ ಅಂಬೇಡ್ಕ‌ರ್ ಭವನದಲ್ಲಿ ಶನಿವಾರ ನಡೆಯಿಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿದ್ದು, ಉತ್ತಮ ಸಾಧನೆ ತೋರಿದೆ ಎಂದರು
ಮಾಜಿ ಸಚಿವ ಬಿ.ರಮಾನಾಥ ರೈ, ಬುಡಾ ಅಧ್ಯಕ್ಷ ಬೇಬಿ ಕುಂದ‌ರ್ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ದ.ಕ.ಜಿಲ್ಲಾ ಪಂಚಗ್ಯಾರಂಟಿ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ, ಜಿಪಂ ಯೋಜನಾ ನಿರ್ದೇಶಕ ಜಯರಾಮ, ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ, ಪಂಚಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಸದಸ್ಯರಾದ ಸುಧೀಂದ್ರ ಶೆಟ್ಟಿ, ಮಹಮ್ಮದ್ ಸಿರಾಜ್, ಸತೀಶ್, ಮುರಳೀಧರ ವೈ, ವಿನಯ ಕುಮಾರ್, ಕಾಂಚಲಾಕ್ಷಿ, ಐಡಾ ಸುರೇಶ್, ಹರ್ಷನ್ ಬಿ, ಪವಿತ್ರಾ ಕೆ, ಚಂದ್ರಶೇಖರ ಆಚಾರ್ಯ, ಅಬ್ದುಲ್ ಮಜೀದ್‌, ಜನಾರ್ದನ ಸಪಲ್ಯ, ಕೃಷ್ಣಪ್ಪ ಪೂಜಾರಿ, ಎನ್. ಅಬ್ದುಲ್ ಕರೀಂ ಉಪಸ್ಥಿತರಿದ್ದರು.

ಆಟಿ ತಿಂಗಳ ಮಹತ್ವದ ಕುರಿತು ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಪಿಡಿಒ ಸುನಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ. ವಂದಿಸಿದರು. ಈ ಸಂದರ್ಭ ವಿವಿಧ ಖಾದ್ಯಗಳ ಪ್ರದರ್ಶನವು ನಡೆಯಿತು.

By Suddi9

Leave a Reply

Your email address will not be published. Required fields are marked *