ಬಂಟ್ವಾಳ :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ ಕೇಂದ್ರ ಕಛೇರಿ ತುಮಕೂರು, ವಿಟ್ಲ ನಗರದ ವತಿಯಿಂದ 15ನೇ, ಶಾಖೆಯಾಗಿ ಶ್ರೀ ಗಣೇಶ ಸಭಾಭವನ ಶಾಖೆ ನೇರಳಕಟ್ಟೆ ಇದರ ಉದ್ಘಾಟನೆಯನ್ನು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ರೈ ಕುರ್ಲೆತ್ತಿಮಾರ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಜೀವನ ನಡೆಸಲು ನಿತ್ಯವೂ ಯೋಗಾಭ್ಯಾಸ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿಯು ಮುಖ್ಯವಾಗಿದ್ದು ಅದಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶುಭಹಾರೈಸಿದರು.
ಸಮಿತಿಯ ಪರಿಚಯ ಮತ್ತು ಧ್ಯೇಯೋದ್ದೇಶಗಳನ್ನು ನಗರ ಸಂಚಾಲಕ ಪ್ರಕಾಶ ಅಣ್ಣಡ್ಕ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು. ಶಿಕ್ಷಕ ದಿವಾಕರ ಕರಿಂಕ ಶಾಖೆ ಅವರು ಮಾತನಾಡಿದರು. ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕರಿಂಕ ಶಾಖೆಯ ಯೋಗ ಬಂಧು ಸದಾನಂದ, ಗಣೇಶ, ಕಸ್ತೂರಿ, ದೇವಕಿ, ಪ್ರೇಮ, ಗೀತಾ, ರೂಪಶ್ರೀ, ಅನುಭವವನ್ನು ಹಂಚಿಕೊಂಡರು.ಯೋಗ ಬಂಧಗಳಿಗೆ ಸೂಚನೆಯನ್ನು ಶಿವಕುಮಾರ್ ನೀಡಿದರು.
ಹೇಮಲತಾ, ನಿರೂಪಿಸಿ , ಅನುರಾಧಾ ಸ್ವಾಗತಿಸಿದರು. ಶಶಿಪ್ರಭಾ ವಂದಿಸಿದರು.150 ಯೋಗ ಬಂಧುಗಳು ಭಾಗವಹಿದಿದ್ದರು*
