ಬಂಟ್ವಾಳ: ಜಮೀಯ್ಯತುಲ್ ಫಲಹ್ ಬಂಟ್ವಾಳ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಶುಕ್ರವಾರ ಲಯನ್ಸ್ ಸೇವಾ ಮಂದಿರದಲ್ಲಿ ಅಧ್ಯಕ್ಷ ಅಬ್ಬಾಸ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ವೀಕ್ಷಕರಾಗಿ ಇಬ್ರಾಹಿಂ ಕೊಡಿಜಾಲ್ ಹಾಗೂ ವಿ. ಇಬ್ರಾಹಿಂ ನಡುಪದವು ಉಪಸ್ಥಿತರಿದ್ದು, ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಜೀವ ಸದಸ್ಯರ ಏಳು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಅಭಿನಂದಿಸಲಾಯಿತು. ಮಸೀದಿ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಹಜಾಜ್ ಗ್ರೂಪ್ ಪರವಾಗಿ ಹನೀಫ್ ಹಾಜಿ ಗೋಳ್ತಮಜಲು ಹಾಗೂ ರೋಟರಿ ಬಂಟ್ವಾಳ ನಗರ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಂಝ ಬಸ್ತಿಕೋಡಿ ಅವರನ್ನು ಸನ್ಮಾನಿಸಲಾಯಿತು.
ಆಶಿಕ್ ಕುಕ್ಕಾಜೆ ಅವರ ಪವಿತ್ರ ಕುರ್‌ಆನ್ ಪಠಿಸಿದರು. ಬಿ.ಎಂ. ತುಂಬೆ ಸ್ವಾಗತಿಸಿದರು. ಕಾರ್ಯದರ್ಶಿ ಹಕೀಮ್ ಕಲಾಯಿ ವಾರ್ಷಿಕ ವರದಿ, ಕೋಶಾಧಿಕಾರಿ ಲತೀಫ್ ನೆರಳಕಟ್ಟೆ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ರಝಾಕ್ ಮಾಸ್ಟರ್ ಅನಂತಾಡಿ ನಿರೂಪಿಸಿದರು. ಇಕ್ಬಾಲ್ ಫರಂಗಿಪೇಟೆ ವಂದಿಸಿದರು.
